ವಿಜಯಪುರ: ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನ ಮಾಡಿದ್ದರೂ ಅವರ ಮೇಲೆ ಮತ್ತೆ ಉತ್ತರ ಕರ್ನಾಟಕದ ರೈತರು ಗರಂ ಆಗಿದ್ದಾರೆ.
ನಿಂಬೆನಾಡು ವಿಜಯಪುರದ ಜನ ಬರದ ನಡುವೆಯೂ ಹೇಗೋ ಸಾಲಸೂಲ ಮಾಡಿ ನಿಂಬೆ ಬೆಳೆದಿದ್ದರು. ಆದರೆ ನೀರಿನ ಕೊರತೆಯಿಂದಾಗಿ ಕೈಗೆ ಬಂದ ಬೆಳೆ ಒಣಗಿ ಹೋಗುತ್ತಿದ್ದು ರೈತರು ಕಂಗೆಟ್ಟಿದ್ದಾರೆ. ಇದನ್ನೂ ಓದಿ: ಇಂಡಿ ನಿಂಬೆಗೆ ಜಿಐ ಮಾನ್ಯತೆ ಪಡೆಯಲು ಸದ್ದಿಲ್ಲದೆ ನಡೆಯುತ್ತಿದೆ ಸಿದ್ಧತೆ
Advertisement
Advertisement
ಬೇರೆ ದಾರಿ ಇಲ್ಲದೆ ರೈತರು ಇದೀಗ ಸಾಲಮಾಡಿ ದುಡ್ಡು ಕೊಟ್ಟು ನೀರು ಕೊಂಡುಕೊಂಡು ಜಮೀನುಗಳಿಗೆ ನೀರುಣಿಸುತ್ತಿದ್ದಾರೆ. ಇನ್ನು ಕಾಲುವೆಗಳಿದ್ದರೂ ಅದರಲ್ಲಿ ನೀರಿಲ್ಲ. ಅಲ್ಲದೇ ಜಿಲ್ಲೆಯ ನಿಂಬೆ ಪ್ರದೇಶವಾದ ಇಂಡಿ ತಾಲೂಕು ಬರಪೀಡಿತ ಅಂತ ಘೋಷಣೆಯಾಗಿದ್ದರೂ ಈವರೆಗೆ ಅಲ್ಲಿನ ರೈತರಿಗೆ ಪರಿಹಾರ ಬಂದಿಲ್ಲ.
Advertisement
ಕೇಂದ್ರ ಬರ ಅಧ್ಯಯನ ತಂಡ ಸೇರಿದಂತೆ ರಾಜ್ಯ ಬರ ಅಧ್ಯಯನ ತಂಡ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರು ಸರ್ಕಾರ ರೈತರ ಕಣ್ಣೊರೆಸಲು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv