ಬೆಳಗಾವಿ: ಮಹದಾಯಿ ಯೋಜನೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗೋವಾ -ಕರ್ನಾಟಕ ಮಧ್ಯೆ ಬಸ್ ಸಂಚಾರ ಸ್ಥಗಿತಗೊಂಡಿದೆ.
ಕರ್ನಾಟಕದಿಂದ ಯಾವುದೇ ವಾಹನ ಗೋವಾಕ್ಕೆ ಹೋಗುತ್ತಿಲ್ಲ. ಗೋವಾದಿಂದ ಯಾವುದೇ ಬಸ್ ಕರ್ನಾಟಕದತ್ತ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗೋವಾಗೆ ಹೋಗುವ ಪ್ರಯಾಣಿಕರು ಬೆಳಗಾವಿ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.
Advertisement
Advertisement
ಮಹದಾಯಿ ನದಿ ಜೋಡಣೆ ಹೋರಾಟ ಮತ್ತೆ ತೀವ್ರತೆ ಪಡೆದಿದೆ. ಕಳೆದ 889 ದಿನಗಳಿಂದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹೋರಾಟಗಾರರು 7.56 ಟಿಎಂಸಿ ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ್ದಾರೆ. ಮಹದಾಯಿ ಹೋರಾಟಗಾರರು ನಡೆಸಿದ ಹೋರಾಟದ ಮುಖ್ಯ ಅಂಶಗಳು ಹೀಗಿವೆ:
Advertisement
* ಮಹದಾಯಿ ಹೋರಾಟಕ್ಕಾಗಿ ಹಲವು ಬಾರಿ ನವಲಗುಂದ ಪಟ್ಟಣ ಬಂದ್.
* ಕಳೆದ ವರ್ಷ ಫೆಬ್ರವರಿ 11ರಂದು ಧಾರವಾಡ ಬಂದ್ ಕರೆ.
* 2016 ಮೇ 12ಕ್ಕೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಬಳಿ ಇರುವ ಜಾಕವೇಲ್ ಬಂದ್ (ಈ ಜಾಕವೇಲ್ ಹುಬ್ಬಳ್ಳಿ ಧಾರವಾಡಕ್ಕೆ ನೀರು ಸರಬರಾಜು ಮಾಡುತ್ತೆ).
* ಹೋರಾಟಕ್ಕೆ ಒಂದು ವರ್ಷವಾದ ಹಿನ್ನೆಲೆ 2016ರ ಜುಲೈ 16ಕ್ಕೆ ಮತ್ತೆ ಧಾರವಾಡ ಜಿಲ್ಲೆ ಬಂದ್‍ಗೆ ಕರೆ.
* 2016ರ ಜುಲೈ 27ರಂದು ಮಹದಾಯಿಗಾಗಿ ತೀವ್ರಗೊಂಡ ಹೋರಾಟ.
* ನವಲಗುಂದ ತಾಲೂಕಿನಲ್ಲಿ ಲಾಠಿಚಾರ್ಜ್, 250ಕ್ಕೂ ಹೆಚ್ಚು ಹೋರಾಟಗಾರರ ಬಂಧನ.
* 2016 ಜುಲೈ 28 ರಂದು ಮತ್ತೆ ಧಾರವಾಡ ಬಂದ್ ಕರೆ.
* ಫೆಬ್ರವರಿ 19, 2016 ರಂದು ನವಲಗುಂದದಲ್ಲಿ ಪ್ರತ್ಯೇಕ ರಾಜ್ಯ ಹೋರಾಟದ ಧ್ವಜವನ್ನ ಹಾರಿಸಿದ ಹೋರಾಟಗಾರರು.
Advertisement
ಇದನ್ನೂ ಓದಿ: ಮಹದಾಯಿಗಾಗಿ ಉತ್ತರ ಕರ್ನಾಟಕ ಬಂದ್: ಎಲ್ಲಿ ಬಂದ್? ಏನ್ ಇರುತ್ತೆ? ಏನ್ ಇರಲ್ಲ?