ಕಾರವಾರ: ಉತ್ತರಕನ್ನಡ (Rain in Uttarakannada) ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಭಾರೀ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ಕಾಲು ಜಾರಿ ಬಿದ್ದು ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟ್ಕುಳಿ ಗ್ರಾಮದಲ್ಲಿ ನಡೆದಿದೆ.
ಸತೀಶ ಪಾಂಡುರಂಗ ನಾಯ್ಕ (40), ಉಲ್ಲಾಸ ಗಾವಡಿ (50) ನೀರುಪಾಲಾದ ದುರ್ದೈವಿಗಳಾಗಿದ್ದಾರೆ. ಜಲಾವೃತವಾಗಿದ್ದ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲು ಜಾರಿ ನೀರಿನಲ್ಲಿ ಬಿದ್ದು ಅನಾಹುತ ನಡೆದಿದೆ. ಇದನ್ನೂ ಓದಿ: ಕುಮಟಾದಲ್ಲಿ ಅಬ್ಬರದ ಮಳೆ 30 ಮರಗಳು ಧರೆಗೆ
- Advertisement
ನೀರಿನ ಆರ್ಭಟಕ್ಕೆ ಇಬ್ಬರ ಶವ ತೇಲಿಕೊಂಡು ಹೋಗಿದ್ದು ಕೆಲವು ಗಂಟೆಗಳ ಹುಡುಕಾಟದ ಬಳಿಕ ಪತ್ತೆಯಾಗಿದೆ. ಘಟನೆ ಸಂಬಂಧ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿ ಮಳೆಗೆ ಇದು ಮೂರನೇ ಬಲಿಯಾಗಿದೆ.
- Advertisement
Web Stories