ಕಾರವಾರ: ಸಾಲಗಾರರಿಂದ ಯಾವುದೇ ಕಿರುಕುಳ ಬಂದರೂ ಸಮೀಪದ ಪೊಲೀಸ್ ಠಾಣೆಗೆ ತಿಳಿಸಿ. ಉತ್ತರ ಕನ್ನಡ ಜಿಲ್ಲಾಡಳಿತ ನಿಮ್ಮ ಜೊತೆ ಇದೆ ಎಂದು ಉತ್ತರ ಕನ್ನಡ ಎಸ್‌ಪಿ ನಾರಾಯಣ .ಎಂ ಸಲಹೆ ನೀಡಿದರು.
ಮೀಟರ್ ಬಡ್ಡಿ ದಂಧೆಕೋರರಿಂದ ಚೆಕ್‌ಬೌನ್ಸ್ ಕಿರುಕುಳ ವಿಚಾರವಾಗಿ ಮಾತನಾಡಿ, ಚೆಕ್‌ಬೌನ್ಸ್ ಕೇಸ್ ವಿಚಾರದಲ್ಲಿ ಹಳಿಯಾಳದಲ್ಲಿ ಒಂದು ಕೇಸ್ ದಾಖಲಾಗಿದೆ. ಮಹಿಳೆಯೊಬ್ಬರಿಂದ ಹಳಿಯಾಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಬ್ದುಲ್, ಶಾಂತಾ, ಭಾಷಾ, ರಾಜು ಮತ್ತು ಸುಭಾನಿ ಐವರ ಮೇಲೆ ದೂರು ಕೊಟ್ಟಿದ್ದಾರೆ. ಈ ಐವರು ಹತ್ತು ಸಾವಿರ ರೂಪಾಯಿಯಂತೆ 50,000 ರೂಪಾಯಿ ಸಾಲ ಕೊಟ್ಟಿದ್ದರು. ಐದು ಜನ ಪ್ರತ್ಯೇಕವಾಗಿ ಐದು ಖಾಲಿ ಚೆಕ್‌ಗಳನ್ನ ಮಹಿಳೆಯಿಂದ ಪಡೆದಿದ್ದಾರೆ. ಆಕೆ ಬಡ್ಡಿ ಸಮೇತ ಸಾಲ ಮರುಪಾವತಿ ಮಾಡಿದ್ದರೂ ಚೆಕ್ ಮರಳಿ ನೀಡಿರಲಿಲ್ಲ. ಈ ಐವರು ಸೇರಿ ಮಹಿಳೆಯನ್ನು ಲೈಂಗಿಕತೆಗೆ ಬಳಸಲು ಮುಂದಾಗಿರುವ ಬಗ್ಗೆ ದೂರು ಬಂದಿದೆ. ದೂರು ಬಂದ ಕೂಡಲೇ ಅಬ್ದುಲ್ ಎಂಬ ಎ1 ಆರೋಪಿಯನ್ನ ಕೂಡಲೇ ಬಂಧಿಸಲಾಗಿದೆ ಎಂದು ತಿಳಿಸಿದರು.
Advertisement
Advertisement
ಸಾಲಗಾರರಿಂದ ಯಾವುದೇ ಕಿರುಕುಳ ಬಂದರೂ ಸಮೀಪದ ಪೊಲೀಸ್ ಠಾಣೆಗೆ ತಿಳಿಸಿ. ಉತ್ತರ ಕನ್ನಡ ಜಿಲ್ಲಾಡಳಿತ ನಿಮ್ಮ ಜೊತೆ ಇದೆ. ಯಾವುದೇ ಕಿರುಕುಳಕ್ಕೂ ಎದೆಗುಂದಿ ತಪ್ಪು ನಿರ್ಧಾರಕ್ಕೆ ಮುಂದಾಗಬೇಡಿ. ಕಿರುಕುಳ ತಪ್ಪಿಸಲೆಂದೇ ಜಿಲ್ಲೆಯ ಪ್ರತಿ ಠಾಣೆಯಲ್ಲಿ ಹೆಲ್ಪ್ ಡೆಸ್ಕ್ ಆರಂಭ ಮಾಡಲಾಗಿದೆ ಎಂದರು.
Advertisement
ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ಕಿರುಕುಳ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ, ಆರ್‌ಬಿಐ ನಿಯಮ ಉಲ್ಲಂಘಿಸಿ ಬಡ್ಡಿ ವಸೂಲಿ ಮಾಡಿದಕ್ಕೆ 4 ಪ್ರಕರಣ ದಾಖಲಾಗಿದೆ. ಬಡ್ಡಿ ವಸೂಲಿಗೆ ಕ್ರಿಮಿನಲ್‌ಗಳನ್ನ ಬಳಿಸಿ ಕಿರುಕುಳ ಕೊಡುತ್ತಿರುವ ಬಗ್ಗೆ ದೂರು ಬಂದಿತ್ತು. ಮೀಟರ್ ಬಡ್ಡಿ ವಸೂಲಿಗೆ ಕಿರುಕುಳ ವಿಚಾರವಾಗಿ 9 ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲು ಆದ ಬಳಿಕ ಇದುವರೆಗೂ ಒಟ್ಟು 39 ಜನರನ್ನ ಬಂಧಿಸಲಾಗಿದೆ ಎಂದು ಹೇಳಿದರು.
Advertisement
ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಸುಲಕ್ಷಮಿ ಎಂಬ ಮಹಿಳೆ, ಕಂಪನಿಯೊಂದರಿಂದ ಸಾಲ ಪಡೆದಿದ್ದು, 2018ರಲ್ಲಿ 4.5 ಲಕ್ಷ ಸಾಲ ಪಡೆದಿದ್ದ ಈಕೆ ಇದುವರೆಗೂ ಬಡ್ಡಿ ತುಂಬ್ತಾನೆ ಇದಾಳೆ ಆದ್ರೆ ಪೂರ್ತಿ ಆಗಿಲ್ಲ. ಬಡ್ಡಿ ಕಂತು ತುಂಬಿಲ್ಲ ಅಂತಾ 5 ಜನ ರಾತ್ರಿ ಮನೆಗೆ ನುಗ್ಗಿ ಅನುಚಿತ ವರ್ತನೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಂಪನಿ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.