ಕಾರವಾರ: ಸಮುದ್ರ ಪಾಲಾಗುತಿದ್ದ ಬೆಂಗಳೂರು ಮೂಲದ ಮೂವರು ಎಂಜಿನಿಯರ್ ಗಳನ್ನು ಲೈಫ್ ಗಾರ್ಡ್ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.
ಬೆಂಗಳೂರು ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲೂಕಿನ ಹರೀಶ್ (24), ಆನಂದ್ (24) ಮತ್ತು ಸುರೇಶ್ (24) ರಕ್ಷಣೆಗೊಳಗಾದವರಾಗಿದ್ದು, ಶಶಿಧರ್ ನಾಯ್ಕ, ಚಂದ್ರಶೇಖರ್ ಹರಿಕಾಂತ್ ರಕ್ಷಿಸಿದ್ದಾರೆ.
ಬೆಂಗಳೂರಿನಿಂದ ಐದು ಜನ ಗೆಳೆಯರೊಂದಿಗೆ ಮುರುಡೇಶ್ವರಕ್ಕೆ ಆಗಮಿಸಿದ್ದ ಇವರು ಸಮುದ್ರದಲ್ಲಿ ಅಲೆಗಳ ಅಬ್ಬರವಿದ್ದರೂ ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗೆ ಮೂರು ಜನರು ಕೊಚ್ಚಿಹೋಗಿದ್ದಾರೆ. ಇದನ್ನು ಗಮನಿಸಿದ ಲೈಫ್ ಗಾರ್ಡ್ ತಮ್ಮ ಜೀವದ ಹಂಗು ತೊರೆದು ರಭಸದ ಅಲೆಯಲ್ಲಿಯೂ ಮೂರು ಜನರನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಮುರುಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.