ಲಾಕ್‍ಡೌನ್ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ- 15 ಜನರ ಬಂಧನ

Public TV
1 Min Read
KWR Arrest

ಕಾರವಾರ: ಲಾಕ್‍ಡೌನ್ ಎಚ್ಚರಿಕೆಯ ನಡುವೆಯೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಎರಡು ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದ 15 ಜನರನ್ನು ಮಸೀದಿಯಲ್ಲಿಯೇ ದಸ್ತಗಿರಿ ಮಾಡಲಾಗಿದೆ.

ಹುನಗುಂದದ ಅಬ್ದುಲ್ ಮುನಾಫ್, ಮಕ್ತುಮಸಾಬ್, ಅಬ್ದುಲ್ ಖಾದರ್ ಅಬ್ದುಲ್ ರೇಹಮಾನ್ ಮುಲ್ಲಾ, ಅಬ್ದುಲ್ ಖಾದರ್ ಅಬ್ದುಲ್ ಗಫಾರ್ ಮುಲ್ಲಾ, ಫೀರ ಅಹ್ಮದ್, ದಾದಾಪೀರ್ ಮತ್ತು ಹಜರತ ಅಲಿ ಹಾಗೂ ವೀರಾಪುರದ ಅಬ್ದುಲ್ ರಜಾಕ್, ಇಮ್ತಿಯಾಜ್, ಮಲ್ಲಿಕ್ ರೆಹಾನ್, ಮೊಹಮ್ಮದ್ ರಫಿಕ್, ಮೊಹಮ್ಮದ್ ಬಸೀರುಲ್, ಮುಸ್ತಾಕ್, ಮೊಹಮ್ಮದ್ ಗೌಸ್ ಆರೋಪಿಗಳಾಗಿದ್ದಾರೆ.

Coronavirus in India

ಹುನಗುಂದ ಗ್ರಾಮದ ಜಾಮೀಯಾ ಮಸೀದಿ ಹಾಗೂ ವೀರಾಪುರದ ನೂರಾನಿ ಮಸೀದಿಯಲ್ಲಿ ಕೆಲ ಮುಸ್ಲಿಮರು ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಪ್ರಾರ್ಥನೆ ಮಾಡುತ್ತಿದ್ದರು. ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ದಾಳಿ ನಡೆಸಿ ಪ್ರಾರ್ಥನೆ ಮಾಡುತ್ತಿದ್ದವರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.

Share This Article