– ಒರಿಸ್ಸಾದ ಬೋಟ್ ಕಾರ್ಮಿಕನಿಗೆ ಡೆಂಗ್ಯೂ
ಕಾರವಾರ: ರಾಜ್ಯದಲ್ಲಿ ಸದ್ಯ ಕೊರೊನಾ ವೈರಸ್ ಭೀತಿ ಉಂಟು ಮಾಡಿರುವ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಡೆಂಗ್ಯೂ ಆತಂಕ ಮೂಡಿಸಿದೆ.
ಕಾರವಾರದ ಬೈತಖೋಲ ಬಂದರು ಪ್ರದೇಶದಲ್ಲಿನ ಮೀನುಗಾರಿಕಾ ಬೋಟ್ ಕಾರ್ಮಿಕನೋರ್ವನಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಕಳೆದ 11 ದಿನಗಳಿಂದ ಆಳ ಸಮುದ್ರ ಮೀನುಗಾರಿಕೆ ತೆರಳುವ ಬೋಟ್ ಗಳು ಬಂದರಿನಲ್ಲೇ ಲಂಗರು ಹಾಕಿ ನಿಂತಿದ್ದು, ಲಾಕ್ ಡೌನ್ ಆದ ಹಿನ್ನೆಲೆ ಬೋಟಿನ ಕಾರ್ಮಿಕರು ಊರಿಗೆ ತೆರಳಲಾಗದೇ ಅದರಲ್ಲೇ ವಾಸ್ತವ್ಯ ಹೂಡಿದ್ದಾರೆ. ಆದರೆ ಬೋಟುಗಳು ಒಂದೇ ಕಡೆ ನಿಂತುಕೊಂಡಿದ್ದ ಪರಿಣಾಮ ಅದರಲ್ಲಿ ಸಂಗ್ರಹವಾಗಿದ್ದ ನೀರಿನಿಂದ ಓರಿಸ್ಸಾ ಮೂಲದ ಕಾರ್ಮಿಕರಿಗೆ ಡೆಂಗ್ಯೂ ಸೋಂಕು ಕಾಣಿಸಿಕೊಂಡಿದೆ.
Advertisement
Advertisement
ಈ ನಿಟ್ಟಿನಲ್ಲಿ ಬೈತಖೋಲಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದ್ದು ಸದ್ಯ ಬೋಟಿನ ಕಾರ್ಮಿಕರನ್ನ ಮಾಲೀಕರ ಯೂನಿಯನ್ ಕಚೇರಿ ಹಾಗೂ ಹಾಲ್ ಗಳಲ್ಲಿ ಉಳಿದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.
Advertisement
ಕರ್ನಾಟಕದಲ್ಲಿ ಕೊರೊನಾ ಪೀಡಿತ ಐದು ಜಿಲ್ಲೆಗಳನ್ನು ರೆಡ್ ಝೋನ್‍ಗೆ ಸೇರ್ಪಡೆಗೊಳಿಸಲಾಗಿದ್ದು ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯೂ ಒಂದಾಗಿದೆ. ಹೀಗಿರುವಾಗ ಜಿಲ್ಲೆಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು ಜನರಲ್ಲಿ ಮತ್ತೆ ಭಯ ಹುಟ್ಟಿಸುವಂತೆ ಮಾಡಿದೆ.