ಕಾರವಾರ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಶರು ವಶಕ್ಕೆ ಪಡೆದಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಬೇಲೆಹಿತ್ತಲ್ನಲ್ಲಿ ನಡೆದಿದೆ.
ಗೋಕರ್ಣದ ಬೇಲೆಹಿತ್ತಲ್ನ ದೇವು ಗೌಡ ಹಾಗೂ ಸುರೇಶ್ ಗೌಡ ಪೊಲೀಸರು ವಶಕ್ಕೆ ಪಡೆದವರು. ಬೇಲೆಹಿತ್ತಲ್ ಬಳಿ ರಸ್ತೆಯಲ್ಲಿ ಗಾಂಜಾವನ್ನು ಪ್ಯಾಕಿಂಗ್ ಮಾಡುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್ಐ ನವೀನ್ ನೇತೃತ್ವದ ತಂಡ ಸುಮಾರು 6 ಸಾವಿರ ಮೌಲ್ಯದ 635 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಕುಮಟಾ ಜೆಎಂಎಫ್ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.