ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಗುತ್ತಿಗೆ ಕಂಪನಿಯೊಂದಿಗೆ ಸೆಟ್ಲ್‌ಮೆಂಟ್ ಮಾಡಿಕೊಳ್ಳುತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬದಲಾವಣೆ ಮಾಡಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಎಸ್.ಕಲ್ಪನಾ ಆದೇಶ ಹೊರಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರ ಸ್ಥಾನಕ್ಕೆ ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿ ಸುಷಮಾ ಗೋಡಬೋಲೆ ಅವರನ್ನು ನೇಮಿಸಲಾಗಿದೆ.
Advertisement
ಸಚಿವರ ಆರೋಪ ಏನಾಗಿತ್ತು?
ನ.1 ರಂದು ಕಾರವಾರ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ರಾಷ್ಟ್ರೀಯ ಹೆದ್ದಾರಿ 766E ಕಾಮಗಾರಿ ನಿಮಿತ್ತ ಶಿರಸಿ-ಕುಮಟಾ ಹೆದ್ದಾರಿ ಬಂದ್ ಮಾಡುವ ಕುರಿತು ಮಾತನಾಡಿ, ಇಲ್ಲಿ ಉಸ್ತುವಾರಿ ನೋಡಿಕೊಳ್ಳಲು ಒಬ್ಬರಿದ್ದಾರೆ. ರಿತೇಶ್ ಕುಮಾರ್ ಸಿಂಗ್ ಎಂದು ಇಲ್ಲಿ ಉಸ್ತುವಾರಿನೋ ಅಥವಾ ಆರ್‌ಎನ್‌ಎಸ್ , IRB ಕಂಪನಿಗಳ ಸೆಟ್ಲ್‌ಮೆಂಟ್‌ಗೆ ಬರುತ್ತಾರೋ ಗೊತ್ತಿಲ್ಲ. ನಮ್ಮ ಯಾವ ಮೀಟಿಂಗ್‌ಗೂ ಬಂದಿಲ್ಲ.
Advertisement
ಅವರು ಬಂದ್ ಮಾಡಿಸುವಂತೆ ಮಾಡಲು ಕೊಟ್ಟು ಹೋಗಿದ್ದಾರೆ. ಕಳೆದ ತಿಂಗಳು ಬಂದ್ ಆಗಬೇಕಿತ್ತು. ನ.1 ರಲ್ಲಿ ಬಂದ್ ಮಾಡಿಸುವಂತೆ ಕೊಟ್ಟಿದ್ದಾರೆ. ಉಸ್ತುವಾರಿ ಎಂದು ಇದ್ದಾರೆ. ನಮ್ಮಲ್ಲಿ ಯಾವುದು ಉಸ್ತುವಾರಿ ಎಂದು ನೋಡಬೇಕು. ಸೆಟ್ಲ್‌ಮೆಂಟ್ ಉಸ್ತುವಾರಿಯೋ ಏನು ಎಂದು ತಿಳಿದುಕೊಳ್ತೇನೆ. ಯಾವುದೇ ಕಾರಣಕ್ಕೆ ಶಿರಸಿ-ಕುಮಟಾ ರಸ್ತೆ ಬಂದ್ ಆಗಬಾರದು. ಕಂಪನಿಗೆ 3 ವರ್ಷ ಅಗ್ರಿಮೆಂಟ್ ಮಾಡಿ ಕೊಟ್ಟಿದ್ರೂ ಕೆಲಸ ಆಗಲಿಲ್ಲ.
Advertisement
ಪುನಃ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ. ಯಾವುದೇ ಅಗ್ರಿಮೆಂಟ್‌ನಲ್ಲಿ ಬಂದ್ ಮಾಡಿ ಕೊಡಬೇಕು ಎಂದು ಇಲ್ಲ. ಸಂಸದರು ಬಂದ್ ಮಾಡಬೇಕು ಎಂದು ಹೇಳಿತ್ತಿದ್ದಾರೆ. ಅವರ ಆಸಕ್ತಿ ಏನಿದೆ ಗೊತ್ತಿಲ್ಲ. ನಮ್ಮ ಶಾಸಕರೂ ಬೆಂಬಲ ಕೊಡ್ತಾ ಇದ್ದಾರೆ. ಅವರು ಆ ರೀತಿ ಬೆಂಬಲ ಕೊಡುತ್ತಿರುವುದರಿಂದ ನಾನೂ ಸುಮ್ಮನಿದ್ದೇನೆ ಎಂದ ಸಚಿವ ಮಂಕಾಳು ವೈದ್ಯ ಹೇಳಿದ್ದರು.
Advertisement
ಇದರ ನಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಸಚಿವರ ಯಾವುದೇ ಸಭೆಗೆ ಹಾಜುರಾಗದ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ನಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯ ಕರ್ತವ್ಯದ ಬಗ್ಗೆ ಉಸ್ತುವಾರಿ ಸಚಿವರೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಘಟನೆ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಡುವೆ ವೈಮನಸ್ಸು ಉಂಟಾಗಿತ್ತು. ಇದೀಗ ಕಾರ್ಯದರ್ಶಿ ಬದಲಾವಣೆ ಸಹ ಮಾಡಲಾಗಿದೆ.