ಕಾರವಾರ: ಮೊಬೈಲ್ ನೆಟ್‍ವರ್ಕ್ (Mobile Network) ಸಮಸ್ಯೆ ಹೆಚ್ಚಿರುವ ಉತ್ತರ ಕನ್ನಡ (Uttara Kannada) ಜಿಲ್ಲೆಗೆ ಕೇಂದ್ರ ಸರ್ಕಾರ ದೂರಸಂಪರ್ಕ ಇಲಾಖೆಯಿಂದ 232 ಹೊಸ ಮೊಬೈಲ್ ಟವರ್ ಗಳನ್ನು ಮಂಜೂರು ಮಾಡಲಾಗಿತ್ತು.
232 ಟವರ್ ಗಳ ಪೈಕಿ 18 ಟವರ್ ಗಳನ್ನು 2G ಇಂದ 3G ಮೇಲ್ದರ್ಜೆಗೆ ಏರಿಸಲಾಗಿದ್ದು, ಇದುವರೆಗೂ ಮೊಬೈಲ್ ಸಿಗ್ನಲ್ ಸಿಗದ 196 ಹಳ್ಳಿಗಳನ್ನು ಗುರುತಿಸಿ ಟವರ್ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಇವುಗಳಲ್ಲಿ ಕಾರವಾರ-08, ಅಂಕೋಲಾ-12, ಜೋಯಿಡಾ – 42, ಕುಮಟಾ-19, ಹೊನ್ನಾವರ-8, ಭಟ್ಕಳ-13, ಸಿದ್ದಾಪುರ -17, ಶಿರಸಿ -24, ಮುಂಡಗೋಡು- 10 ಹೊಸ ಟವರ್ ಗೆ ಮಂಜೂರು ದೊರಕಿದ ನಂತರ ಜಿಲ್ಲಾಡಳಿತ ಉಚಿತವಾಗಿ ಅರಣ್ಯ ಭೂಮಿಯನ್ನು ಆಯಾ ತಾಲೂಕು ವ್ಯಾಪ್ತಿಯಲ್ಲಿ ಟವರ್ ನಿರ್ಮಾಣಕ್ಕೆ 30 ವರ್ಷದ ಲೀಸ್ ನೊಂದಿಗೆ ನೀಡಿತ್ತು.
ಆದರೆ ಇದೀಗ ಅರಣ್ಯ ಕಾಯ್ದೆ ಅಡ್ಡಿಯಾದ್ದರಿಂದ ಮೊದಲ ಹಂತದಲ್ಲಿ ಶಿರಸಿಯ 06 ಹಾಗೂ ಜಿಲ್ಲೆಯ ಒಟ್ಟು 72 ಸ್ಥಳಗಳಲ್ಲಿ ನೀಡಿದ್ದ ಜಾಗದ ಮಂಜೂರಾತಿ ಆದೇಶವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ರವರು ಹಿಂಪಡೆದುಕೊಂಡಿದ್ದಾರೆ. ಇದರಿಂದ ಹಲವು ವರ್ಷದಿಂದ ನೆಟ್ವರ್ಕ ಸಮಸ್ಯೆ ಎದುರಿಸುತಿದ್ದ ಗ್ರಾಮಗಳಿಗೆ ಟವರ್ ನಿರ್ಮಾಣ ವಾಗುವ ಮುಂಚೆಯೇ ವಿಘ್ನ ಎದುರಾಗಿದೆ. ಇದನ್ನೂ ಓದಿ: ತಮಿಳುನಾಡು ಕೇಳಿದಷ್ಟು ನೀರು ಹರಿಸಲು ಸಾಧ್ಯವಿಲ್ಲ: ಅಫಿಡವಿಟ್‌ನಲ್ಲಿ ಕರ್ನಾಟಕ ಹೇಳಿದ್ದೇನು?
ಶಿರಸಿಯ ಹುಲೇಕಲ್ ಭಾಗದ -3, ಸಂಪಖಂಡ ಭಾಗದ 2, ಬನವಾಸಿ ಭಾಗದ -1 ಟವರ್ ಗಳನ್ನು ಜಿಲ್ಲಾಧಿಕಾರಿ ಆದೇಶದಿಂದ ನಿರ್ಮಾಣ ಹಂತದಲ್ಲೇ ಕೈ ಬಿಡಲಾಗಿದೆ. ಮೊಬೈಲ್ ನೆಟ್‍ವರ್ಕ್ ಇಲ್ಲದ ಜೋಯಿಡಾ ಭಾಗಕ್ಕೂ ಈ ಸಮಸ್ಯೆ ಎದುರಾಗಿದ್ದು, ಜಿಲ್ಲಾಧಿಕಾರಿಗಳು ಆದೇಶ ಹಿಂಪಡೆದಿದ್ದರಿಂದ ಇಲ್ಲಿನ ಜನತೆಗೂ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಎದುರಾಗಿದೆ.
ಶಿರಸಿಯಲ್ಲಿ ಮಂಜೂರಾಗಿದ್ದ ಟವರ್ ಗಳನ್ನು ಬಿಎಸ್‍ಎನ್‍ಎಲ್ ಇಲಾಖೆ ಯಿಂದ ಕಾಮಗಾರಿ ಸಹ ಪ್ರಾರಂಭಮಾಡಲಾಗಿತ್ತು. ಆದರೆ ಇದೀಗ ಆದೇಶ ಹಿಂಪಡೆದಿದ್ದರಿಂದ ಬಿಎಸ್‍ಎನ್‍ಎಲ್‍ಗೂ ದೊಡ್ಡ ನಷ್ಟ ಎದುರಾಗುವ ಜೊತೆ ಮೊಬೈಲ್ ನೆಟ್‍ವರ್ಕ್ ಆಗುವ ಆಸೆ ಹೊಂದಿದ್ದ ಜಿಲ್ಲೆಯ ಜನರು ಇದೀಗ ಬೇಸರ ವ್ಯಕ್ತಪಡಿಸುವಂತಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]