ಕಾರವಾರ: ಬಂದರಿನ ಬಳಿ ತೆರಳುತಿದ್ದ ಬೋಟಿಗೆ (Boat) ತಳಭಾಗದಲ್ಲಿ ಕಲ್ಲು ತಾಗಿ ಮುಳುಗಡೆಯಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ (Ankola) ತಾಲೂಕಿನ ಬೇಲಿಕೇರಿ ಬಂದರಿನಲ್ಲಿ ನಡೆದಿದೆ.
ಶ್ರೀಕಾಂತ್ ತಾಂಡೇಲ್ ಎಂಬುವಬರಿಗೆ ಸೇರಿದ ದುರ್ಗಾ ಪ್ರಸಾದ್ ಹೆಸರಿನ ಪರ್ಷಿಯನ್ ಬೋಟ್ ಇದಾಗಿದ್ದು, ಮೀನುಗಾರಿಕೆಗೆ ತೆರಳಲು ಬೋಟ್ ಸಿದ್ಧಪಡಿಸಿ ತೆರಳುವಾಗ ಕಲ್ಲು ಹೊಡೆದು ಬೋಟ್ ಮುಳುಗಡೆಯಾಗಿ ಲಕ್ಷಾಂತರ ಮೌಲ್ಯದ ವಸ್ತುಗಳು ನಷ್ಟವಾಗಿದೆ. ಶುಕ್ರವಾರ ಇದೇ ಭಾಗದಲ್ಲಿ ಪರ್ಷಿಯನ್ ಬೋಟ್ ಮುಳುಗಡೆಯಾಗಿತ್ತು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಚುನಾವಣೆ – 50% ಮಹಿಳಾ ಮೀಸಲಾತಿ ಮಾಡೋಣ: ಡಿಕೆ ಶಿವಕುಮಾರ್
ಬಂದರಿನಲ್ಲಿ ಹೂಳು ತೆಗೆಯದೇ ಇರುವುದರಿಂದ ಬೋಟ್ ಮುಳುಗಡೆಯಾಗುತ್ತಿದೆ. ಬಂದರು ಬಳಿ ಹೂಳು ತುಂಬಿ ಅನಾಹುತ ಸೃಷ್ಟಿಯಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: BETL ಅಧಿಕಾರಿಗಳ ನಿರ್ಲಕ್ಷ್ಯ – ಹೊಸೂರು ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್