ಲಕ್ನೋ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಯ ಮೇಲೆ ಗುಂಡಿನ ದಾಳಿ ನಡೆಸಿ ಎನ್‍ಕೌಂಟರ್ ಸ್ಪಷಲಿಸ್ಟ್ ಅಜಯ್ ಶರ್ಮಾ ನೇತೃತ್ವದ ತಂಡ ಬಂಧಿಸಿದೆ.
ಮೇ 7ರಂದು ರಾಮ್‍ಪುರ ಜಿಲ್ಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈಯಲಾಗಿತ್ತು. ಈ ಕೃತ್ಯವನ್ನು ನಝೀಲ್ ಎಸಗಿ ಪರಾರಿಯಾಗಿದ್ದ. ಈತನ ಶೋಧ ಕಾರ್ಯ ನಡೆಸುತ್ತಿದ್ದ ಪೊಲೀಸರು ಪರಾರಿಯಾಗುತ್ತಿದ್ದಾಗ ಕಾಲಿಗೆ ಶೂಟ್ ಮಾಡಿ ಬಂಧಿಸಿದ್ದಾರೆ.
Advertisement
Advertisement
ಎನ್‍ಕೌಂಟರ್ ಸ್ಪೆಷಲಿಸ್ಟ್ ಐಪಿಎಸ್ ಅಧಿಕಾರಿ ಡಾ.ಅಜಯ್ ಪಾಲ್ ಶರ್ಮಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಮೂರು ಸುತ್ತು ಗುಂಡು ಹಾರಿಸಲಾಗಿದ್ದು, ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಕಾಲಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಅಧಿಕಾರಿಗೆ ಪ್ರಶಂಸೆ: ಆರೋಪಿ ಬಂಧನದ ಕುರಿತು ಟ್ವಿಟ್ಟರ್ ಮೂಲಕ ಶರ್ಮಾ ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದ್ದು, ಅತ್ಯಾಚಾರಿ ಮತ್ತು ಕೊಲೆಗಾರನ ವಿರುದ್ಧ ನಮ್ಮ ಕ್ರಮಕ್ಕೆ ಅಪಾರ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು. ಸಹೋದರ ಮತ್ತು ಮಗ ಎಂದು ಹೇಳಿ ದೇಶದ ವಿವಿಧೆಡೆಯಿಂದ ಸಾವಿರಕ್ಕೂ ಅಧಿಕ ಜನ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.
Advertisement
I m thankful to all for immense support of our action against the rapist and murderer. Received more than 1000 calls today from different parts of india being addressed as brother and son & congratulating. Proud to be in team of @rampurpolice @Uppolice @dgpup @myogiadityanath
— Ajay Sharma (@ajaysharmaips) June 23, 2019
ಶರ್ಮಾ ಅವರು 2011ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದು, ಲುಧಿಯಾನಾ ಸೇರಿದಂತೆ ಉತ್ತರ ಪ್ರದೇಶದ ವಿವಿಧೆಡೆ ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ರಾಮ್‍ಪುರ ಜಿಲ್ಲೆಯ ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆರೋಪಿಗಳ ಬಂಧನ ಹಾಗೂ ಎನ್‍ಕೌಂಟರ್‍ನಿಂದಲೇ ಉತ್ತರ ಪ್ರದೇಶ ಪೊಲೀಸರು ಸುದ್ದಿಯಲ್ಲಿದ್ದು, ಶರ್ಮಾ ಅವರನ್ನು ಯುಪಿ ಸಿಗಂ ಎಂದೇ ಬಣ್ಣಿಸಲಾಗುತ್ತಿದೆ.