ಲಕ್ನೋ: ಉತ್ತರ ಪ್ರದೇಶದ (Uttar Pradesh) ಮಹಿಳೆಯೊಬ್ಬಳು ತನ್ನ ಪತಿಯನ್ನ ಮಂಚಕ್ಕೆ ಕಟ್ಟಿಹಾಕಿ ಕೊಂದು, 5 ತುಂಡುಗಳಾಗಿ ಕತ್ತರಿಸಿ ಬಿಸಾಡಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ನಡೆದಿದೆ. ಬಳಿಕ ತನಿಖೆಯಲ್ಲಿ (Investigation) ತಾನೇ ಕೊಂದಿರುವುದಾಗಿ ತಪ್ಪೊಪ್ಪಿಕೊಂಡ ನಂತರ ಪೊಲೀಸರು ಬಂಧಿಸಿದ್ದಾರೆ.
ಮೃತರನ್ನ ಗಜ್ರೌಲಾ ಪ್ರದೇಶದ ಶಿವನಗರ ನಿವಾಸಿ ರಾಮ್ ಪಾಲ್ (55) ಎಂದು ಗುರುತಿಸಲಾಗಿದೆ. ದುಲಾರೊ ದೇವಿ ಆರೋಪಿಯಾಗಿದ್ದಾಳೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ನೀಡಿದ ಚಪಾತಿ ಊಟದಲ್ಲಿ ಜಿರಳೆ ಪತ್ತೆ – ಪ್ರಯಾಣಿಕ ಶಾಕ್!
ರಾಮ್‌ಪಾಲ್ ಪತ್ನಿ ದುಲಾರೊ ದೇವಿ ಕೆಲ ದಿನಗಳಿಂದ ಪತಿಯ ಸ್ನೇಹಿತನೊಂದಿಗೆ ವಾಸವಿದ್ದಳು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಗ್ರಾಮಕ್ಕೆ ಹಿಂದಿರುಗಿದಾಗ ಪತಿ ಕಾಣೆಯಾಗಿರುವ ಬಗ್ಗೆ ಮಗನಿಗೆ ತಿಳಿಸಿದ್ದಾಳೆ. ನಂತರ ಮಗ ಪೊಲೀಸ್ ಠಾಣೆಗೆ (UP Police) ದೂರು ನೀಡಿದ್ದಾನೆ. ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವ ವೇಳೆ ಪತ್ನಿ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ಇದನ್ನೂ ಓದಿ: ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿಸಿದ ಪೌರಕಾರ್ಮಿಕ ಮಹಿಳೆಯರಿಗೆ 10 ಕೋಟಿ ರೂ. ಬಂಪರ್
ಪತಿ ರಾತ್ರಿ ಮಲಗಿದ್ದಾಗ ಮಂಚಕ್ಕೆ ಕಟ್ಟಿಹಾಕಿ ಕೊಂದು, ಕೊಡಲಿಯಿಂದ ದೇಹದ ಭಾಗಗಳನ್ನ ಕತ್ತರಿಸಿ ಹತ್ತಿರದ ಕಾಲುವೆಯಲ್ಲಿ (Canal) ಬಿಸಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ನಂತರ ಪತ್ನಿಯನ್ನ ಬಂಧಿಸಿದ ಪೊಲೀಸರು ರಾಮ್‌ಪಾಲ್ ದೇಹದ ಭಾಗಗಳನ್ನ ಕಾಲುವೆಯಿಂದ ಹೊರತೆಗೆಯಲು ಕಾರ್ಯಚರಣೆ ನಡೆಸುತ್ತಿದ್ದಾರೆ. ಮೃತರ ರಕ್ತಸಿಕ್ತ ಬಟ್ಟೆ ಹಾಗೂ ಹಾಸಿಗೆ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]