ಲಕ್ನೋ: ಮಹಿಳೆಯೊಬ್ಬಳು (Woman) ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು (Husband) ಕೊಂದು, ಮೃತದೇಹವನ್ನು ಮರ ಕತ್ತರಿಸೋ ಮಷಿನ್‌ನಲ್ಲಿ ಪೀಸ್ ಪೀಸ್ ಮಾಡಿ ಚರಂಡಿ ಹಾಗೂ ಗಂಗಾ ನದಿಗೆ ಎಸೆದ ಆಘಾತಕಾರಿ ಘಟನೆ ಉತ್ತರಪ್ರದೇಶದ (Uttar Pradesh) ಸಂಭಾಲ್‌ನಲ್ಲಿ ನಡೆದಿದೆ. ಹತ್ಯೆ ಆರೋಪಿಗಳನ್ನು ರೂಬಿ ಮತ್ತು ಗೌರವ್ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ ಕೆ ಬಿಷ್ಣೋಯ್ ತಿಳಿಸಿದ್ದಾರೆ.
ಚಂದೌಸಿ ಪ್ರದೇಶದ ಮೊಹಲ್ಲಾ ಚುನ್ನಿ ನಿವಾಸಿ ರೂಬಿ ನವೆಂಬರ್ 18 ರಂದು ಪತಿ ರಾಹುಲ್ (38) ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಳು. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೀಗಿದ್ದಾಗ ಡಿಸೆಂಬರ್ 15 ರಂದು, ಈದ್ಗಾ ಪ್ರದೇಶದ ಬಳಿಯ ಚರಂಡಿಯಲ್ಲಿ ತಲೆ, ಕೈ ಮತ್ತು ಕಾಲುಗಳಿಲ್ಲದ ಮೃತದೇಹ ಪತ್ತೆಯಾಗಿತ್ತು. ಇದನ್ನೂ ಓದಿ: ಹಣ ಹೂಡಿ ಅಧಿಕ ಲಾಭಗಳಿಸಿ – ಆಸೆಗೆ ಬಿದ್ದು 76 ಲಕ್ಷ ಪಂಗನಾಮ ಹಾಕಿಸಿಕೊಂಡ ವ್ಯಕ್ತಿ!
ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ವಿಧಿವಿಜ್ಞಾನ ತಂಡವು ವಿವರವಾದ ಪರೀಕ್ಷೆ ನಡೆಸಿ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿತ್ತು. ತನಿಖೆಯ ಸಮಯದಲ್ಲಿ, ದೇಹದ ಮೇಲೆ ʻರಾಹುಲ್ʼ ಎಂಬ ಹೆಸರಿನ ಹಚ್ಚೆ ಪೊಲೀಸರಿಗೆ ಕಂಡುಬಂದಿದೆ. ಇದಾದ ಬಳಿಕ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ವರದಿಗಳ ಪರಿಶೀಲನೆ ಮಾಡಿದ್ದರು.
ಬಳಿಕ ರೂಬಿಯ ಮೇಲೆ ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ ಅಕ್ರಮ ಸಂಬಂಧದಲ್ಲಿರುವುದು ಪತಿಗೆ ಗೊತ್ತಾಗಿದ್ದಕ್ಕಾಗಿ ಪ್ರಿಯಕರ ಗೌರವ್ ಜೊತೆ ಸೇರಿ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಕೊಲೆಗೆ ಸುತ್ತಿಗೆ, ಕಬ್ಬಿಣದ ರಾಡ್ ಬಳಸಿದ್ದೇವೆ. ಬಳಿಕ ಮೃತದೇಹವನ್ನು ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಿ, ಚರಂಡಿ ಹಾಗೂ ನದಿಗೆ ಎಸೆದಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಕಬ್ಬಿಣದ ಸುತ್ತಿಗೆ ಮತ್ತು ಹಲ್ಲೆಗೆ ಬಳಸಲಾದ ರಾಡ್ ಇತರ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳನ್ನು ಪತ್ನಿ ಜೊತೆ ಬಿಡಲು ಕೋರ್ಟ್ ಆದೇಶ – ವಿಷವುಣಿಸಿ ಮಕ್ಕಳ ಹತ್ಯೆಗೈದು, ತಾಯಿ ಜೊತೆ ಪತಿಯೂ ನೇಣಿಗೆ ಶರಣು

