ಲಕ್ನೋ: ಶ್ರೀರಾಮ ಜನ್ಮಭೂಮಿಯಲ್ಲಿ ಬಾಲರಾಮನ ಮೂರ್ತಿ (Ram Idol) ಪ್ರತಿಷ್ಠಾಪನೆಯಾಗಿ 1 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ 3 ದಿನಗಳ ಕಾಲ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. ಇಡೀ ನಗರವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ಬಾಲರಾಮನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಅಯೋಧ್ಯೆಯಲ್ಲಿ ಕನ್ನಡಿಗ ಅರುಣ್ ಯೋಗಿರಾಜ್ (Arun Yogiraj) ಅವರ ಕೆತ್ತನೆಯಲ್ಲಿ ಮೂಡಿಬಂದಿರುವ ಈ ಶಿಲ್ಪವನ್ನು ʻರಾಮಲಲ್ಲಾʼ ಅಂತಲೂ ಕರೆಯುತ್ತಾರೆ. ಅಷ್ಟಕ್ಕೂ ಆ ಹೆಸರಿನಿಂದ ಕರೆಯುವುದು ಏಕೆ ಅನ್ನೋ ಚುಟುಕು ಮಾಹಿತಿ ಇಲ್ಲಿದೆ….
Advertisement
ಉತ್ತರ ಭಾರತದ ಆಡುಭಾಷೆಯಲ್ಲಿ ಎಳೆಯ ಗಂಡು ಮಕ್ಕಳನ್ನು ಮುದ್ದಾಗಿ ಲಲ್ಲಾ (Ramlalla), ಲಲ್ಲನ್ ಎಂದು ಕರೆಯುತ್ತಾರೆ. ಶ್ರೀರಾಮ ಅಯೋಧ್ಯೆಯಲ್ಲಿ (Ayodhya) ಹುಟ್ಟಿ ಬೆಳೆದವನು. ಅಯೋಧ್ಯೆಯಲ್ಲಿರುವ ಮೂರ್ತಿ ಕೂಡ ಎಳೆಯ ವಯಸ್ಸಿನ ಶ್ರೀರಾಮನದ್ದು ಎಂದು ಹೇಳಲಾಗಿದೆ. ಹೀಗಾಗಿ ಈ ಬಾಲರೂಪಿ ರಾಮನನ್ನು ಭಕ್ತರು ಪ್ರೀತಿಯಿಂದ ಕರೆಯುವ ಹೆಸರು ʻರಾಮಲಲ್ಲಾʼ.
Advertisement
Advertisement
ಇಂದಿನಿಂದ 3 ದಿನ ಏನೇನು ಕಾರ್ಯಕ್ರಮ?
* ಜ.11ರ ಮೊದಲ ದಿನ ಪ್ರತಿಷ್ಠಾ ದ್ವಾದಶಿಯ ಆರಂಭಿಕ ದಿನ, ಕಳೆದ ವರ್ಷದ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮದಂತೆಯೇ ಕಾರ್ಯಕ್ರಮ ಆರಂಭ
* ‘ಪಂಚಾಮೃತ’ ಮತ್ತು ಸರಯೂ ಜಲದ ಅಭಿಷೇಕವನ್ನು ಒಳಗೊಂಡಂತೆ ಅಭಿಷೇಕ ಸಮಾರಂಭ ಬೆಳಗ್ಗೆ 10 ಗಂಟೆಗೆ ಶುರು
* ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ರಾಮಲಲ್ಲಾಗೆ ಅಭಿಷೇಕ
* ಮಧ್ಯಾಹ್ನ 12.20ಕ್ಕೆ ಪ್ರಾಥಮಿಕ ಆರತಿ
* ಚಿನ್ನದ ಮತ್ತು ಬೆಳ್ಳಿಯ ಎಳೆಗಳಿಂದ ದೆಹಲಿಯಲ್ಲಿ ತಯಾರಿಸಿದ ವಿಶಿಷ್ಟ ಪೀತಾಂಬರಿಯಿಂದ ರಾಮಲಲ್ಲಾ ಮೂರ್ತಿಯ ಅಲಂಕಾರ
* ಬಳಿಕ 3 ದಿನ ಕಾಲ ಮಂಟಪ ಮತ್ತು ಯಜ್ಞಶಾಲೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮಗಳು, ಶಾಸ್ತ್ರೀಯ ಸಾಂಸ್ಕೃತಿಕ ಪ್ರದರ್ಶನಗಳು, ವಿವಿಧ ಆಚರಣೆಗಳು ಮತ್ತು ದೈನಂದಿನ ರಾಮಕಥಾ ಪ್ರವಚನಗಳು ಏರ್ಪಾಡು
* 110 ಗಣ್ಯರು, ಜನಸಾಮಾನ್ಯರು ಸೇರಿ 5,000 ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ
Advertisement
ವಾರ್ಷಿಕೋತ್ಸವ ಇಂದೇ ಏಕೆ?
2024ರಲ್ಲಿ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ಜನವರಿ 22ರಂದು ನಡೆಸಲಾಯಿತು. ಆದರೆ, ಈ ವರ್ಷ ಅಂದರೆ 2025ರಲ್ಲಿ ಅಯೋಧ್ಯೆ ರಾಮ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವವನ್ನು ಜನವರಿ 11 ರಂದು ಶನಿವಾರ ಆಚರಿಸಲಾಗುತ್ತಿದೆ. ಯಾಕೆಂದರೆ, ವೈದಿಕ ಸನಾತನ ಸಂಸ್ಕೃತಿಯ ಕ್ಯಾಲೆಂಡರ್ ಪ್ರಕಾರ, 2025ರಲ್ಲಿ ಪುಷ್ಯ ಮಾಸದ ಕೂರ್ಮ ದ್ವಾದಶಿಯು ಜನವರಿ 11 ರಂದು ಬರಲಿದೆ. ಕೂರ್ಮ ದ್ವಾದಶಿಯ ಆಧಾರದ ಮೇಲೆ ಅಯೋಧ್ಯೆ ರಾಮ ಮಂದಿರದ ಪ್ರತಿಷ್ಠಾಪನಾ ಮಹೋತ್ಸವವನ್ನು ಆಚರಿಸಲಾಗುವುದು. ಈ ವರ್ಷ ಅಂದರೆ 2025ರ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆಯು ಸಂಪೂರ್ಣವಾಗಿ ಒಂದು ವರ್ಷವನ್ನು ಪೂರೈಸಲಿದೆ.
2025ರ ಜನವರಿ 11ರಂದು ಶನಿವಾರ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯು ಇರಲಿದೆ. ಈ ದಿನ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವ ಆಚರಿಸಲಾಗುವುದು. ಈ ಶುಭ ದ್ವಾದಶಿ ತಿಥಿಯಂದು ಹತ್ತು ಶುಭ ಯೋಗಗಳು ಏಕಕಾಲದಲ್ಲಿ ರೂಪುಗೊಳ್ಳುತ್ತಿವೆ.