ಲಕ್ನೋ: ಕೇಂದ್ರ ಗೃಹ ಖಾತೆ ಸಚಿವ ಅಜಯ್ ಮಿಶ್ರಾ ಥೇನಿ ಅವರ ಸೋದರಳಿಯ ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟಿದ್ದಾರೆ.
ಸೋನು ಮಿಶ್ರಾ ಮೃತ ದುರ್ದೈವಿ. ಲಖಿಂಪುರ ಖೇರಿ ಜಿಲ್ಲೆಯಲ್ಲಿ ಸಂಜೆ 5:10ರ ಸುಮಾರಿಗೆ ಬೀಸಿದ ಪ್ರಬಲ ಬಿರುಗಾಳಿಯಿಂದ ಈ ದುರ್ಘಟನೆ ನಡೆದಿದೆ.
Advertisement
Advertisement
ಸೋನು ಅವರು ಇಂದು ತಮ್ಮ ಮೋಟಾರ್ ಸೈಕಲ್‍ನಲ್ಲಿ ಬನ್ವಾರಿಪುರದಿಂದ ಲಖಿಂಪುರಕ್ಕೆ ಬರುತ್ತಿದ್ದರು. ಈ ವೇಳೆ ಖಂಬರಖೇಡ ಸಕ್ಕರೆ ಕಾರ್ಖಾನೆ ಬಳಿ ಜೋರಾಗಿ ಬಿರುಗಾಳಿ ಬೀಸಿದೆ. ಈ ಸಂದರ್ಭದಲ್ಲಿ ರಸ್ತೆ ಬದಿಯ ಮರವೊಂದು ಸೋನು ಅವರ ಬೈಕ್ ಮೇಲೆ ಬಿದ್ದಿದೆ. ಪರಿಣಾಮ ಬೈಕ್ ಸಮೇತ ಸೋನು ಮರದಡಿ ಅಪ್ಪಚ್ಚಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯುದ್ದಕ್ಕೂ ಕಾಡ್ಗಿಚ್ಚು – ನೆಲಬಾಂಬ್‌ಗಳು ಸ್ಫೋಟ
Advertisement
ಘಟನೆ ನಡೆದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಹೇಗೋ ಮರವನ್ನು ಕಡಿದು ತೆಗೆದು, ಅವರ ಮೃತ ದೇಹವನ್ನು ತೆಗೆದರು. ಸ್ವಲ್ಪ ಸಮಯದ ನಂತರ ಮೃತಪಟ್ಟಿರುವುದು ಕೇಂದ್ರ ಗೃಹ ಖಾತೆ ಸಚಿವ ಅಜಯ್ ಮಿಶ್ರಾ ಥೇನಿ ಅವರ ಸೋದರಳಿಯ ಸೋನು ಮಿಶ್ರಾ ಎಂದು ಜನರಿಗೆ ತಿಳಿದುಬಂದಿದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಪ್ರವಾಹ – 4 ಲಕ್ಷಕ್ಕೂ ಅಧಿಕ ಮಂದಿಗೆ ಹಾನಿ, ಕೊಚ್ಚಿಹೋದ ರಸ್ತೆ, ರೈಲು ಹಳಿ
Advertisement
ಇತ್ತ ಅಜಯ್ ಮಿಶ್ರಾ ಥೇನಿ ಗುರುವಾರ ಪ್ರಯಾಗರಾಜ್‍ಗೆ ಬರಬೇಕಿತ್ತು. ಆದರೆ ಸೋದರಳಿಯನ ಮರಣದ ಸುದ್ದಿ ಕೇಳಿ ತಮ್ಮ ಎಲ್ಲಾ ಕೆಲಸವನ್ನು ಬಿಟ್ಟು ಅಂತಿಮ ಸಂಸ್ಕಾರಕ್ಕಾಗಿ ಅವರು ಲಖಿಂಪುರ ಖೇರಿಗೆ ತೆರಳಿದ್ದಾರೆ.