ಮಧ್ಯರಾತ್ರಿ ಮನೆಯ ಬಾಗಿಲು ಒಡೆದು ಮಲಗಿದ್ದ ಸಹೋದರಿಯರಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು!

Public TV
1 Min Read
BARELI

ಬರೇಲಿ: ಉತ್ತರಪ್ರದೇಶದ ಬರೇಲಿ ಜಿಲ್ಲೆಯ ನವಾಬ್ಗಂಜ್ ಪ್ರದೇಶದ ಮನೆಯೊಂದರಲ್ಲಿ ಇಬ್ಬರು ಯುವತಿಯರು ಮಲಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರಿಗೆ ಬೆಂಕಿಯಿಟ್ಟ ಆಘಾತಕಾರಿ ಘಟನೆ ನಡೆದಿದೆ.

18 ವರ್ಷದ ಗುಲ್ಶಾನ್ ಹಾಗೂ 17 ವರ್ಷದ ಫಿಜಾ ಮಲಗಿದ್ದ ವೇಳೆ ದುಷ್ಕರ್ಮಿಗಳ ತಂಡವೊಂದು ಮನೆಯ ಬಾಗಿಲು ಒಡೆದು, ಒಂದೇ ಹಾಸಿಗೆಯ ಮೇಲೆ ಮಲಗಿದ್ದ ಯುವತಿಯರು ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವಿಚಾರ ತಿಳಿದ ಯುವತಿಯರ ಕುಟುಂಬಸ್ಥರು ಕೂಡಲೇ ಅವರನ್ನು ನಗರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯಿಂದ ಗುಲ್ಶಾನ್ ಸ್ಥಿತಿ ಚಿಂತಾಜನಕವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇನ್ನು ಇವರ ಸಹೋದರಿ ಫಿಜಾಗೆ ಶೇ. 40 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ನಾನು ಸಹೋದರಿ ಜೊತೆ ಒಂದೇ ಹಾಸಿಗೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಮನೆಯ ಬಾಗಿಲು ಒಡೆದು ಬಂದ ಕೆಲ ವ್ಯಕ್ತಿಗಳು ನಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ನಾವು ಎಚ್ಚರಗೊಂಡಾಗ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರು ಯಾರು? ಎಲ್ಲಿಯವರು ಅಂತ ಗೊತ್ತಿಲ್ಲ. ಅಲ್ಲದೇ ಅವರ ಮುಖವೂ ಸರಿಯಾಗಿ ನಮಗೆ ಕಂಡಿಲ್ಲ ಅಂತ ಪಿದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನಿಡಿದ್ದಾರೆ.

ತನ್ನ ಮಕ್ಕಳ ಮೇಲೆ ಈ ಕೃತ್ಯ ಎಸಗಿದವರು ಯಾರು ಅಂತ ಗೊತ್ತಿಲ್ಲ. ನಮಗೆ ಯಾರ ಮೇಲೂ ದ್ವೇಷವಿಲ್ಲ ಅಂತ ಸಂತ್ರಸ್ತೆಯರ ತಾಯಿ ಹೇಳಿದ್ದಾರೆ.

ಸದ್ಯ ಪೊಲೀಸರು ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದಾರೆ.

 

Share This Article