ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ ನೆರವೇರಿಸಿದರು.
Uttar Pradesh: Prime Minister Narendra Modi offers prayers at Dasaswamedh Ghat in Varanasi pic.twitter.com/jNhYXX4Xu7
— ANI (@ANI) May 14, 2024
Advertisement
2024 ರ ಲೋಕಸಭಾ ಚುನಾವಣೆಗೆ 11:40 ಕ್ಕೆ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುಂಚಿತವಾಗಿ ಅವರು ಗಂಗಾ ನದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ‘ಹರ್ ಹರ್ ಮಹಾದೇವ್’ ಘೋಷಣೆಯ ನಡುವೆ ಗಂಗಾ ಪೂಜೆಯನ್ನು ಪೂರ್ಣಗೊಳಿಸಿದರು. ವೇದ ಮಂತ್ರಗಳ ಪಠಣದ ಜೊತೆಗೆ ಮೋದಿ ದಶಾಶ್ವಮೇಧ್ ಘಾಟ್‌ನಲ್ಲಿ Dasaswamedh Ghat) ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದರು.
Advertisement
Advertisement
ಇಂದು ಗಂಗಾ ಸಪ್ತಮಿ, ಈ ದಿನ ಗಂಗಾ ಮಾತೆಗೆ ಪೂಜೆ ಸಲ್ಲಿಸುವುದು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಜ್ಯೋತಿಷಿ ಪಂಡಿತ್ ರಿಷಿ ದ್ವಿವೇದಿ ಹೇಳಿದ್ದಾರೆ. ಅದರಂತೆ ಪ್ರಧಾನಿಯವರು ಇಂದು ಗಂಗಾರತಿ ಬೆಳಗಿದ್ದಾರೆ. ಇದನ್ನೂ ಓದಿ: ಶಂಕರಾಚಾರ್ಯರು ಸಂಚರಿಸಿದ್ದ ರಸ್ತೆಯಲ್ಲಿ ಮೋದಿ 6 ಕಿ.ಮೀ ರೋಡ್ ಶೋ – ಮಂಗಳವಾರವೇ ನಾಮಪತ್ರ ಸಲ್ಲಿಕೆ ಯಾಕೆ?
Advertisement
#WATCH | Uttar Pradesh: Prime Minister Narendra Modi at the Dasaswamedh Ghat in Varanasi
PM Narendra Modi will file his nomination for #LokSabhaElections2024 from Varanasi today. pic.twitter.com/XpWevHCogd
— ANI (@ANI) May 14, 2024
ಇದಕ್ಕೂ ಮುನ್ ತಮ್ಮ ಎಕ್ಸ್ ನಲ್ಲಿ, ಕಾಶಿಯೊಂದಿಗಿನ ನನ್ನ ಸಂಬಂಧವು ಅದ್ಭುತವಾಗಿದೆ. ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅಲ್ಲದೇ 10 ವರ್ಷಗಳ ಹಿಂದೆ ನಾನು ಕಾಶಿಗೆ ಬಂದಾಗ, ಗಂಗಾ ಮಾತೆ ನನ್ನನ್ನು ಕರೆದಿದ್ದಾಳೆ ಎಂದು ಹೇಳಿದ್ದೆ. ಆದರೆ ಕಳೆದ 10 ವರ್ಷಗಳಲ್ಲಿ ಗಂಗೆ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ ಎಂದು ಪ್ರಧಾನಿ ಮೋದಿ ಹೇಳಿದರು.