ಲಕ್ನೋ: ಲಾಕ್‍ಡೌನ್ ಉಲ್ಲಂಘನೆ ಮಾಡಿದ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆತಂದು ಆತನ ಕೈಯಲ್ಲಿ ಸಪ್ನಾ ಚೌಧರಿಯ ಹಾಡಿಗೆ ಪೊಲೀಸರು ಡ್ಯಾನ್ಸ್ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಉತ್ತರ ಪ್ರದೇಶದ ಎಟಾವಾ ಜಿಲ್ಲೆಯ ಪೊಲೀಸ್ ಠಾಣೆಯೊಳಗೆ ಈ ಘಟನೆ ನಡೆದಿದೆ. ಈ ವಿಡಿಯೋದಲ್ಲಿ ಹರ್ಯಾಣದ ಸ್ಟಾರ್ ಸಪ್ನಾ ಚೌಧರಿ ನೃತ್ಯ ಮಾಡಿರುವ ಜನಪ್ರಿಯ ಹಾಡಿಗೆ ಯುವಕ ಡ್ಯಾನ್ಸ್ ಮಾಡಿದ್ದು, ಇದನ್ನು ಪೊಲೀಸರು ಸುತ್ತಲು ನಿಂತು ನೋಡುತ್ತಿರುತ್ತಾರೆ. ಜೊತೆಗೆ ಅವರೇ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
Advertisement
A police post or chowki in @etawahpolice , in the times of #Lockdown2 . Chowki incharge has been removed after this video of him and other cops making this man dance to a Sapna Chaudhary song went viral . Reason unclear , some ‘suggestions’ man had violated lockdown ! pic.twitter.com/tb0LXeMp8d
— Alok Pandey (@alok_pandey) May 3, 2020
Advertisement
ಪೊಲೀಸ್ ಠಾಣೆಯೊಳಗೆ ಯುವಕ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಪೊಲೀಸರು ಯುವಕನನ್ನು ಯಾಕೆ ಡಾನ್ಸ್ ಮಾಡಿಸಿದ್ದಾರೆ ಎಂಬ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ವರದಿಗಳ ಪ್ರಕಾರ ಆತ ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಈ ಕಾರಣದಿಂದ ಪೊಲೀಸರು ಠಾಣೆಗೆ ಕರೆತಂದು ಡ್ಯಾನ್ಸ್ ಮಾಡುವ ಶಿಕ್ಷೆ ನೀಡಿದ್ದಾರೆ ಎಂದು ಹೇಳಲಾಗಿದೆ.
Advertisement
Advertisement
ಇದರ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಈ ವಿಡಿಯೋ ನಯಾ ಶಹರ್ ಪೊಲೀಸ್ ಠಾಣೆಯಲ್ಲಿ ಮಾಡಲಾಗಿದೆ. ಆ ಪೊಲೀಸ್ ಠಾಣೆಯ ಇನ್ಚಾರ್ಜ್ ಆಫೀಸರ್ ಯುವಕನಿಗೆ ಈ ರೀತಿ ಡ್ಯಾನ್ಸ್ ಮಾಡಲು ಹೇಳಿದ್ದಾರೆ. ಈ ಶಿಕ್ಷೆ ನೀಡಬಾರದಿತ್ತು. ಈಗ ಈ ವಿಡಿಯೋವನ್ನು ಡಿಲೀಟ್ ಮಾಡಿಸಲಾಗಿದೆ. ಜೊತೆಗೆ ಆ ಪೊಲೀಸ್ ಅಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.