ಲಕ್ನೋ: ಆರೋಪಿಯೊಬ್ಬ ಹಸ್ತಮೈಥುನದ ವೀಡಿಯೋವೊಂದನ್ನು ಯುವತಿಗೆ ವಾಟ್ಸಪ್‍ನಲ್ಲಿ ಕಳುಹಿಸಿ ಆಕೆಯನ್ನು ಲೈಂಗಿಕ ಸಂಬಂಧಕ್ಕೆ ಕರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ನೋಯ್ದಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ ಆರೋಪಿ ಮತ್ತು ಯುವತಿ ಸುಮಾರು ಎರಡು ವರ್ಷಗಳಿಂದ ಪರಿಚಿತರು. ಆರೋಪಿಯ ವರ್ತನೆ ಇಷ್ಟವಾಗದ ಕಾರಣ ಆಕೆ ಇತ್ತೀಚೆಗೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದಾದ ನಂತರ, ಮಾರ್ಚ್ 19 ರಂದು, ಆರೋಪಿಯು ಜಿಮ್‍ನಲ್ಲಿ ಆಕೆಗೆ ನನ್ನ ಜೊತೆ ಲೈಂಗಿಕ ಸಂಬಂಧ ಬೆಳೆಸಲು ಒಂದು ಅವಕಾಶ ನೀಡು ಎಂದು ಪೀಡಿಸುತ್ತಿದ್ದನು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ
Advertisement
Advertisement
ಹಂತ-3 ಪೊಲೀಸ್ ಠಾಣೆಯ ಉಸ್ತುವಾರಿ ವಿವೇಕ್ ತ್ರಿವೇದಿ ಅವರ ಪ್ರಕಾರ, ಯುವತಿಯು ಆರೋಪಿಯ ವಿರುದ್ಧ ಭಾನುವಾರ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಇಬ್ಬರ ನಡುವೆ ಮತ್ತೆ ಮಾತುಕತೆ ಆರಂಭವಾದಾಗ ಯುವಕ ತನ್ನೊಂದಿಗೆ ದೈಹಿಕ ಸಂಬಂಧ ಹೊಂದುವ ಆಸೆ ವ್ಯಕ್ತಪಡಿಸಿದ್ದಾಗಿ ಸಂತ್ರಸ್ತೆ ಅದರಲ್ಲಿ ಹೇಳಿದ್ದರು. ಆದರೆ ಯುವತಿ ನಿರಾಕರಿಸಿದ್ದಾಳೆ. ಇದರ ನಂತರ, ಮಾರ್ಚ್ 21 ರಂದು, ಮಧ್ಯಾಹ್ನ 2:40ರ ಸುಮಾರಿಗೆ ಆರೋಪಿಯು ವಾಟ್ಸಾಪ್‍ನಲ್ಲಿ ಅಶ್ಲೀಲ ವೀಡಿಯೊವನ್ನು ಆಕೆಗೆ ಕಳುಹಿಸಿದ್ದಾನೆ. ಸಂತ್ರಸ್ತೆ ತನ್ನ ದೂರಿನಲ್ಲಿ, ನಾನು ಸಂದೇಶವನ್ನು ತೆರೆದಾಗ, ಅದು ಅವನ ಹಸ್ತಮೈಥುನದ ವೀಡಿಯೊವಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆರ್.ಎನ್ ನಾಯಕ ಕೊಲೆ ಕೇಸ್ – ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ
Advertisement
Advertisement
ದೂರಿನ ಮೇರೆಗೆ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಮೇಲೆ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ) ಮತ್ತು 509 (ಮಹಿಳೆಯ ವಿನಯವನ್ನು ಅವಮಾನಿಸುವ ಉದ್ದೇಶ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಎಸ್‍ಎಚ್‍ಒ, ಆರೋಪಿಯನ್ನು ಹಿಡಿಯಲು ತಂಡವನ್ನು ರಚಿಸಿದ್ದರು. ಸೋಮವಾರ ಬೆಳಗ್ಗೆ ಸೆಕ್ಟರ್ 61 ರ ರಿಂಗ್ ಕ್ರಾಸ್‍ರೋಡ್‍ನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ತನಿಖೆಯ ವೇಳೆ ಆರೋಪಿ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದ ವಿಚಾರ ತಿಳಿದು ಬಂದಿದೆ.