ಲಕ್ನೋ: ಉತ್ತರ ಪ್ರದೇಶದ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಗೆದ್ದು ಅಧಿಕಾರಕ್ಕೆ ಏರಿದ ಬಿಜೆಪಿ ಈಗ ವಿಧಾನ ಪರಿಷತ್ ಚುನಾವಣೆಯಲ್ಲೂ ಭರ್ಜರಿ ಜಯಗಳಿಸಿದೆ.
ಒಟ್ಟು 36 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 33, ಪಕ್ಷೇತರ 2, ಜೆಎಸ್‌ಡಿ ಒಂದು ಸ್ಥಾನದಲ್ಲಿ ಜಯಗಳಿಸಿದೆ. ವಿರೋಧ ಪಕ್ಷವಾದ ಎಸ್‌ಪಿ ಜೊತೆ ಬಿಎಸ್‌ಪಿ, ಕಾಂಗ್ರೆಸ್ ಶೂನ್ಯ ಸಂಪಾದಿಸಿದೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಪತ್ರಕರ್ತನಿಗೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್
Advertisement
Advertisement
ಬಿಜೆಪಿ ಜಯಗಳಿಸಿದ್ದರೂ ವಾರಣಾಸಿ ಕ್ಷೇತ್ರದಲ್ಲಿ ಸೋತಿದೆ. ಜೈಲಿನಲ್ಲಿರುವ ಮಾಫಿಯಾ ಡಾನ್ ಬ್ರಿಜೇಶ್ ಸಿಂಗ್ ಪತ್ನಿ ಅನುಪಮಾ ಸಿಂಗ್ ಸತತ ಎರಡನೇ ಬಾರಿ ಜಯಗಳಿಸಿದ್ದಾರೆ. ಅನುಪಮಾ ಸಿಂಗ್ 4,234 ಮತಗಳನ್ನು ಪಡೆದರೆ ಎಸ್‌ಪಿಯ ಉಮೇಶ್ ಯಾದವ್ 345 ಮತ ಪಡೆದಿದ್ದಾರೆ. ಬಿಜೆಪಿ ಸುಧಾಮ ಪಾಟೇಲ್ 170 ಮತಗಳನ್ನು ಪಡೆದರು. 1998ರಿಂದ ಬ್ರಿಜೇಶ್ ಕುಟುಂಬ ಈ ಕ್ಷೇತ್ರವನ್ನು ತನ್ನ ಬಳಿಯೇ ಇರಿಸಿಕೊಂಡಿದೆ. ಇದನ್ನೂ ಓದಿ: ತಿರುಪತಿ ದೇಗುಲದಲ್ಲಿ ಕಾಲ್ತುಳಿತ – ವೆಂಕಟೇಶ್ವರನ ದರ್ಶನಕ್ಕೆ ಭಕ್ತಾದಿಗಳ ನೂಕುನುಗ್ಗಲು