ಅಲಹಾಬಾದ್: ಪತ್ನಿಯ ಗ್ರಾಮ ಪಂಚಾಯತ್ ಚುನಾವಣೆಯ ಖರ್ಚುಗಳನ್ನು ಭರಿಸಲು ಪತಿಯೊಬ್ಬ ಕಳ್ಳತನಕ್ಕೆ ಇಳಿದ್ದಿದ್ದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಪಂಚ್‍ಲಾಲ್ ವರ್ಮ ಎಂಬಾತ ಎರಡು ಜನರ ತಂಡವನ್ನು ಕಟ್ಟಿಕೊಂಡು 65 ಕಳ್ಳತನ ಎಸಗಿದ್ದ. ಪ್ರತಾಪ್‍ಗಡ ಠಾಣಾ ವ್ಯಾಪ್ತಿಯಲ್ಲಿನ ರಾಜಕೀಯ ನಾಯಕರು, ಸರ್ಕಾರಿ ಅಧಿಕಾರಿಗಳು, ಅವರ ಸಂಬಂಧಿಕರ ಮನೆಗಳಲ್ಲಿ ಪಂಚ್‍ಲಾಲ್ ವರ್ಮನ ಗ್ಯಾಂಗ್ ಕಳ್ಳತನ ಎಸಗಿದೆ.
Advertisement
ಪ್ರತಾಪ್‍ಗಡ ಜಿಲ್ಲೆಯ ಲಾಲ್‍ಗಂಜ್ ಬ್ಲಾಕ್‍ನ ಮಧವ ಗ್ರಾಮದಲ್ಲಿ ಗ್ರಾಮ ಪ್ರಧಾನ್ ಚುನಾವಣೆಗೆ ನನ್ನ ಪತ್ನಿ ನಿಂತಿದ್ದಳು. ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಯೋಜಿಸಿದ್ದೆ. ಚುನಾವಣಾ ಖರ್ಚು ಮತ್ತು ವಿಜಯೋತ್ಸವಕ್ಕೆ ನಾನು ಆಪ್ತರ ಬಳಿ 25 ಲಕ್ಷ ರೂ. ಸಾಲ ಮಾಡಿದ್ದೆ. ಈ ಸಾಲವನ್ನು ತೀರಿಸಲು ಕಳ್ಳತನ ಕೃತ್ಯಕ್ಕೆ ಇಳಿದೆ ಎಂದ ವಿಚಾರಣೆ ವೇಳೆ ಪಂಚ್‍ಲಾಲ್ ವರ್ಮ ತಪ್ಪನ್ನು ಒಪ್ಪಿಕೊಂಡಿದ್ದಾನೆ.
Advertisement
44 ಗ್ರಾಂ ಚಿನ್ನ, 1.278 ಕೆಜಿ ಬೆಳ್ಳಿ, 12,100 ರೂ. ನಗದು, 315 ರೈಫಲ್ ಹಾಗೂ ಒಂದು ಕಂಟ್ರಿ ಪಿಸ್ತೂಲ್ ಹಾಗೂ ಗುಂಡುಗಳನ್ನು ಪಂಚ್‍ಲಾಲ್ ವರ್ಮ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಕದ್ದ ಕದ್ದ ಚಿನ್ನಾಭರಣಗಳನ್ನು ಸ್ಥಳೀಯ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು. ಚಿನ್ನದ ಬೆಲೆಯ 60% ರಷ್ಟು ಬೆಲೆಗೆ ವ್ಯಾಪಾರಿಗಳನ್ನು ಚಿನ್ನವನ್ನು ಖರೀದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.