ಲಕ್ನೋ: ಟಾಯ್ಲೆಟ್ ಸೀಟ್ ಕದ್ದ ಆರೋಪದ ಮೇಲೆ ದಲಿತ ವ್ಯಕ್ತಿಯೊಬ್ಬನನ್ನು (Dalit) ಸ್ಥಳೀಯರೇ ಥಳಿಸಿ, ತಲೆ ಬೋಳಿಸಿ, ಮುಖಕ್ಕೆ ಮಸಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಹ್ರೈಚ್‌ನಲ್ಲಿ ನಡೆದಿದೆ.
ದಿನಗೂಲಿ ಕೆಲಸ ಮಡುತ್ತಿದ್ದ ರಾಜೇಶ್ ಕುಮಾರ್ ಜಿಲ್ಲೆಯ ಹಾರ್ಡಿ ಪ್ರದೇಶದಲ್ಲಿ ಮನೆಯೊಂದರಲ್ಲಿ ಶೌಚಾಲಯದ ಸೀಟ್ ಕದ್ದಿದ್ದಾನೆ ಎಂದು ಆರೋಪಿಸಿ, ಸ್ಥಳೀಯ ಬಿಜೆಪಿ (BJP) ನಾಯಕ ರಾಧೇಶ್ಯಾಮ್ ಮಿಶ್ರಾ ಹಾಗೂ ಅವರ ಇಬ್ಬರು ಸಹಾಯಕರು ರಾಜೇಶ್ ಕುಮಾರ್‌ನನ್ನು ಕಂಬಕ್ಕೆ ಕಟ್ಟಿ, ಆತನ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದಿದ್ದಾರೆ. ಇದರ ವೀಡಿಯೋ ಸಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ನಿಧನ
Advertisement
Advertisement
ಘಟನೆ ಬೆಳಕಿಗೆ ಬಂದ ತಕ್ಷಣ ಪೊಲೀಸರು ರಾಧೇಶ್ಯಾಮ್ ಮಿಶ್ರಾನ ಇಬ್ಬರು ಸಹಾಯಕರನ್ನು ಬಂಧಿಸಿದ್ದಾರೆ. ಆದರೆ ಮಿಶ್ರಾ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳೀಯ ಬಿಜೆಪಿ ನಾಯಕ ಹಾಗೂ ಬೆಂಬಲಿಗರು ಜಾತಿವಾದಿ ಟೀಕೆಗಳನ್ನು ಮಾಡಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಹಬ್ಬದಂದೇ ಸೂರ್ಯಗ್ರಹಣ- ಬೆಂಗಳೂರಿನ ದೇಗುಲಗಳು ಬಂದ್
Advertisement
ರಾಜೇಶ್ ಕುಮಾರ್ ಮೇಲೆ ಕಳ್ಳತನದ ಆರೋಪ ಹೊರಿಸಿದ್ದು, ಅವರನ್ನು ಪೊಲೀಸರ ಕೈಗೆ ಒಪ್ಪಿಸಬೇಕಿತ್ತು. ಆದರೆ ಸ್ಥಳೀಯರು ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಹಲ್ಲೆ, ಕ್ರಿಮಿನಲ್ ಬೆದರಿಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ಅಪರಾಧಗಳನ್ನು ಶಿಕ್ಷಿಸಲು ಕಠಿಣ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.