-ಹೆಲ್ಮೆಟ್ ಧರಿಸದಿದ್ದಕ್ಕೆ ದಂಡ
ಲಕ್ನೊ: ಪೊಲೀಸರು ದಂಡ ಹಾಕಿದ್ದಕ್ಕೆ ಕೋಪಗೊಂಡ ವಿದ್ಯುತ್ ಇಲಾಖೆಯ ಸಿಬ್ಬಂದಿ ಠಾಣೆಯ ವಿದುತ್ ಸಂಪರ್ಕ ಕಡಿತಗೊಳಿಸಿರುವ ಘಟನೆ ಉತ್ತರ ಪ್ರದೇಶದ ಮಹಾರಾಜಾಗಂಜ್ ಕ್ಷೇತ್ರದ ಚಿಉಟಹಾ ಎಂಬಲ್ಲಿ ನಡೆದಿದೆ.
Advertisement
ಮಂಗಳಬಾರ ವಿದ್ಯುತ್ ಇಲಾಖೆಯ ಉದ್ಯೋಗಿ ಅಜಿತ್ ಕುಮಾರ್ ಎಂಬಾತ ಹೆಲ್ಮೆಟ್ ಹಾಕಿಕೊಳ್ಳದೇ ಬೈಕ್ ಚಲಾಯಿಸುತ್ತಿದ್ದರಿಂದ ಚಿಉಟಹಾ ಠಾಣೆಯ ಪೊಲೀಸರು ದಂಡ ಹಾಕಿದ್ದರು. ಇದರಿಂದ ಕೋಪಗೊಂಡ ಅಜಿತ್ ಕುಮಾರ್ ಬುಧವಾರ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾನೆ. ಪೊಲೀಸ್ ಠಾಣೆಯ ಸ್ವಂತ ಕಟ್ಟಡವಿಲ್ಲದ ಕಾರಣ ಪಂಚಾಯ್ತಿ ಭವನದಲ್ಲಿ ನಡೆಯುತ್ತಿದೆ. ಅಜಿತ್ ಕುಮಾರ್ ಇಡೀ ಪಂಚಾಯ್ತಿಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ.
Advertisement
Advertisement
ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ವಿದ್ಯುತ್ ಕಂಬದಿಂದ ಇಳಿಯುತ್ತಿದ್ದ ಅಜಿತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದ್ಯುತ್ ಸಂಪರ್ಕ ಏಕೆ ಕಡಿತಗೊಳಿಸಿದ್ದ ಎಂಬುವುದಕ್ಕೆ ಅಜಿತ್ ಕುಮಾರ್ ಸ್ಪಷ್ಟವಾದ ಉತ್ತರ ನೀಡಿಲ್ಲ. ಕೊನೆಗೆ ವಿದ್ಯುತ್ ಇಲಾಖೆಯ ಕಚೇರಿಗೆ ಫೋನ್ ಮಾಡಿ ಪೊಲೀಸರು ವಿಚಾರಿಸಿದ್ದಾರೆ.
Advertisement
ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಾವು ಸೂಚಿಸಿಲ್ಲ. ಸಿಬ್ಬಂದಿಯಿಂದಾದ ತಪ್ಪಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕ್ಷಮೆ ಕೇಳಿದ್ದಾರೆ. ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಅಜಿತ್ ಕುಮಾರ್ ದಂಡ ಹಾಕಿದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರೋದಾಗಿ ಬಾಯಿ ಬಿಟ್ಟಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿರುವ ಇಲಾಖೆಯ ಹಿಡಿಯ ಅಧಿಕಾರಿಯೊಬ್ಬರು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.