– ಲುಡೋ ಆಡುವಾಗ ಎಡವಟ್ಟು
ಲಕ್ನೋ: ನಿನಗೆ ಕೊರೊನಾ ಬಂದಿದೆ ಎಂದು ತಮಾಷೆ ಮಾಡಿದ ಸ್ನೇಹಿತ ಮೇಲೆ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಜಾರ್ಚಾ ಪ್ರದೇಶದಲ್ಲಿ ನಡೆದಿದೆ.
ಕೊರೊನಾ ವೈರಸ್ ಎಷ್ಟರ ಮಟ್ಟಿಗೆ ಜನರಲ್ಲಿ ಭಯ ತರಿಸಿದೆ ಎಂದರೆ ನಮ್ಮ ಜೊತೆಯಲ್ಲಿ ಇರುವವರು ಯಾರೇ ಅನೇಕ ಬಾರಿ ಕೆಮ್ಮಿದರೆ ಅವರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಬಂದಿದೆ. ಹಾಗೆಯೇ ಲುಡೋ ಆಡುವಾಗ ಕೆಮ್ಮಿದ ಗೆಳಯನನ್ನು ಕೊರೊನಾ ಬಂದಿದೆ ಎಂದು ಕೀಟಲೆ ಮಾಡಿದವನು ಈಗ ಗುಂಡಿನ ಏಟು ತಿಂದು ಆಸ್ಪತ್ರೆ ಸೇರಿದ್ದಾನೆ.
Advertisement
Advertisement
ಗುಂಡಿನ ಏಟು ತಿಂದು ಆಸ್ಪತ್ರೆಗೆ ಸೇರಿದವನನ್ನು ಪ್ರತೀಕ್ ಮತ್ತು ಗುಂಡು ಹಾರಿಸಿದವನನ್ನು ಸುರೇಶ್ ಎಂದು ಗುರುತಿಸಲಾಗಿದೆ. ಪ್ರತೀಕ್ ಮತ್ತು ಸುರೇಶ್ ಸ್ನೇಹಿತರಾಗಿದ್ದು, ಮಂಗಳವಾರ ರಾತ್ರಿ 9 ಗಂಟೆಗೆ ಇನ್ನಿಬ್ಬರು ಸ್ನೇಹಿತರ ಜೊತೆ ಸೇರಿಕೊಂಡು ಲುಡೋ ಆಡಲು ಅವರ ಏರಿಯಾದಲ್ಲಿ ಇದ್ದ ಒಂದು ದೇವಸ್ಥಾನಕ್ಕೆ ಹೋಗಿದ್ದರು. ಲೂಡೋ ಆಡವಾಗ ಸುರೇಶ್ ಹಲವು ಬಾರಿ ಕೆಮ್ಮಿದ್ದಾನೆ.
Advertisement
ಸುರೇಶ್ ಕೆಮ್ಮಿದ್ದನ್ನು ನೋಡಿ ಪ್ರತೀಕ್, ತುಂಬ ಕೆಮ್ಮುತ್ತಿದ್ದಾನೆ. ಅವನಿಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ತಮಾಷೆ ಮಾಡಿದ್ದಾನೆ. ಈ ತಮಾಷೆ ವಿಕೋಪಗೆ ಹೋಗಿದೆ. ಕೆಮ್ಮಿದಾಗಲೆಲ್ಲ ಕೊರೊನಾ ಕೊರೊನಾ ಅನ್ನುತ್ತಿದ್ದ ಪ್ರತೀಕ್ ಕೋಪಗೊಂಡ ಸುರೇಶ್ ತನ್ನ ಬಳಿ ಇದ್ದ ಪಿಸ್ತೂಲ್‍ನಿಂದ ಶೂಟ್ ಮಾಡಿದ್ದಾನೆ. ನಂತರ ಗನ್ ಶಬ್ದ ಕೇಳಿದ ಸುತ್ತಮುತ್ತಲಿನ ಜನರು ದೇವಸ್ಥಾನದ ಬಳಿ ಬಂದಿದ್ದಾರೆ.
Advertisement
ಜನರು ಬರುವುದನ್ನು ಕಂಡ ಸುರೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಕಾಲಿಗೆ ಗುಂಡು ಬಿದ್ದು ನರಳುತ್ತಿದ್ದ ಪ್ರತೀಕ್ ನನ್ನು ಸ್ಥಳೀಯರು ನೋಯ್ಡಾದ ಕೈಲಾಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ಆರೋಪಿ ಸುರೇಶ್‍ಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.