ಲಕ್ನೋ: ಇಲ್ಲಿಯವರೆಗೆ ಧಾರ್ಮಿಕ ಸ್ಥಳಗಳಿಂದ 45,773 ಲೌಡ್ ಸ್ಪೀಕರ್ ತೆಗೆಯಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ
ಕಾನೂನು ಸುವ್ಯವಸ್ಥೆಯ ಎಡಿಜಿಪಿ ಪ್ರಶಾಂತ್ ಕುಮಾರ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿ, ಇಲ್ಲಿಯವರೆಗೆ 45,773 ಲೌಡ್‌ಸ್ಪೀಕರ್‌ಗಳನ್ನು ತೆಗೆಯಲಾಗಿದೆ. 58,861 ಧ್ವನಿವರ್ಧಕಗಳ ಧ್ವನಿಯ ಮಟ್ಟವನ್ನು ಕಡಿಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ಶನಿವಾರ ಯೋಗಿ ಅದಿತ್ಯನಾಥ್ ಸರ್ಕಾರ ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕವನ್ನು ತೆಗೆಯುವಂತೆ ಆದೇಶ ಪ್ರಕಟಿಸಿತ್ತು. ಇದನ್ನೂ ಓದಿ: ಮೇ 4ರವರೆಗೆ ಪೊಲೀಸ್, ಎಲ್ಲಆಡಳಿತ ಅಧಿಕಾರಿಗಳ ರಜೆ ರದ್ದು- ಯೋಗಿ ಆದಿತ್ಯನಾಥ್
ಪೊಲೀಸರು ಧಾರ್ಮಿಕ ನಾಯಕರ ಜೊತೆ ಸಂವಹನ ನಡೆಸಿ ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆಯಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು.