ನವದೆಹಲಿ: ಚೀನಾ ಮೂಲದ 100ಕ್ಕೂ ಹೆಚ್ಚು ಆ್ಯಪ್‍ಗಳ ಮೂಲಕ 500 ಕೋಟಿ ರೂ.ಗೂ ಹೆಚ್ಚು ಲೋನ್ ನೀಡಿ ಗ್ರಾಹಕರ ಮಾಹಿತಿಯನ್ನು ಚೀನಾಗೆ ಕಳುಹಿಸುತ್ತಿದ್ದ ಉತ್ತರಪ್ರದೇಶ ಮೂಲದ ಗ್ಯಾಂಗ್‍ನ 22 ಜನರನ್ನು ಬಂಧಿಸಲಾಗಿದೆ.
Advertisement
ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಗ್ಯಾಂಗ್ 100ಕ್ಕೂ ಹೆಚ್ಚು ಆ್ಯಪ್‍ಗಳನ್ನು ಬಳಕ್ಕೆ ಮಾಡಿಕೊಂಡು ಗ್ರಾಹಕರಿಗೆ ಲೋನ್ ನೀಡಿತ್ತು. ಬಳಿಕ ಲೋನ್ ವೇಳೆ ಗ್ರಾಹಕರ ಮಾಹಿತಿಯನ್ನು ಪಡೆದುಕೊಂಡು ಆ ಮಾಹಿತಿಯನ್ನು ಚೀನಾ ಮತ್ತು ಹಾಕಾಂಗ್‍ಗೆ ಕಳುಹಿಸುವ ವ್ಯವಸ್ಥಿತ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಇದನ್ನೂ ಓದಿ: ಇಂಧನಕ್ಕಾಗಿ ತಿರುವನಂತಪುರಂನಲ್ಲಿ ಶ್ರೀಲಂಕಾದ 4 ವಿಮಾನಗಳು ಲ್ಯಾಂಡಿಂಗ್
Advertisement
ಉತ್ತರಪ್ರದೇಶ ಮೂಲದ ಈ ಗ್ಯಾಂಗ್ ಕಳೆದ ಎರಡು ತಿಂಗಳಿನಿಂದ ಲಕ್ನೋದಲ್ಲಿ ಕಾಲ್ ಸೆಂಟರ್ ತೆರೆದು ಕಾರ್ಯಚರಣೆಗೆ ನಡೆಸುತ್ತಿತ್ತು. ಗ್ರಾಹಕರಿಗೆ ಫೋನ್ ಮಾಡಿ ಲೋನ್ ಕೊಡುವುದಾಗಿ ತಿಳಿಸಿ ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡಿದ ಬಳಿಕ ಕ್ಷಣ ಮಾತ್ರದಲ್ಲಿ ಬ್ಯಾಂಕ್ ಅಕೌಂಟ್‍ಗೆ ಹಣ ಬರುತ್ತಿತ್ತು. ಬಳಿಕ ಆ್ಯಪ್‍ಗಳ ಮೂಲಕ ಗ್ರಾಹಕರ ಮೊಬೈಲ್‍ನಲ್ಲಿದ್ದಂತ ದಾಖಲೆ, ಫೋಟೋಗಳನ್ನು ಬಳಸಿಕೊಂಡು ಸುಲಿಗೆ ಮತ್ತು ಗ್ರಾಹಕರಿಗೆ ಬೆದರಿಕೆ ಹಾಕುತ್ತಿತ್ತು ಮತ್ತು ಗ್ರಾಹಕರ ಮಾಹಿತಿಯನ್ನು ಚೀನಾ ಮತ್ತು ಹಾಂಕಾಂಗ್‍ಗೆ ಕಳುಹಿಸುತ್ತಿತ್ತು ಎಂಬ ಮಾಹಿತಿ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ- ಶಿರಚ್ಛೇದನ ಮಾಡುವುದಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್
Advertisement
Delhi Police bust extortion racket providing user databases to servers based in China, Hong Kong
Read @ANI Story | https://t.co/SHKenN2bv4#China #DelhiPolice #HongKong pic.twitter.com/kPC6Gf99hm
— ANI Digital (@ani_digital) August 20, 2022
Advertisement
ಈಗಾಗಲೇ ಆ್ಯಪ್‍ಗಳ ಮೂಲಕ ಲೋನ್ ನೀಡಿ ಕಿರುಕುಳ ನೀಡಿ ಸುಲಿಗೆ ಮಾಡುತ್ತಿರುವ ಬಗ್ಗೆ 100ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದಾಗ ಉತ್ತರಪ್ರದೇಶದ ಗ್ಯಾಂಗ್ ದಿನಕ್ಕೆ 1 ಕೋಟಿ ರೂ.ಗೂ ಹೆಚ್ಚು ವ್ಯವಹಾರವನ್ನು ನಡೆಸುತ್ತಿತ್ತು. ಗ್ರಾಹಕರಿಗೆ ಕ್ಯಾಶ್ ಪೋರ್ಟ್, ರೂಪಾಯಿ ವೇ, ಲೋನ್ ಕ್ಯೂಬ್, ವಾವ್ ರೂಪಾಯಿ, ಸ್ಮಾರ್ಟ್ ವಾಲೆಟ್, ಜೈಂಟ್ ವಾಲೆಟ್, ಹಾಯ್ ರೂಪಾಯಿ, ಸ್ವಿಫ್ಟ್ ರುಪೀ, ವಾಲೆಟ್‍ವಿನ್, ಫಿಶ್‍ಕ್ಲಬ್, ಯೆಹ್‍ಕ್ಯಾಶ್, ಐಮ್ ಲೋನ್, ಗ್ರೋಟ್ರೀ, ಮ್ಯಾಜಿಕ್ ಬ್ಯಾಲೆನ್ಸ್, ಯೋಕಾಶ್, ಫಾರ್ಚೂನ್ ಟ್ರೀ, ಸೂಪರ್‍ಕಾಯಿನ್, ರೆಡ್ ಮ್ಯಾಜಿಕ್ ಈ ಎಲ್ಲಾ ಆ್ಯಪ್‍ಗಳ ಮೂಲಕ ಲೋನ್ ನೀಡಿ ಬಳಿಕ ಗ್ರಾಹಕರ ಮಾಹಿತಿಯನ್ನು ಕದಿಯುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.