ಲಕ್ನೋ: ಅಸ್ಸಾಂ ಮೂಲದ ನಿವೃತ್ತ ವಾಯುಪಡೆಯ ಅಧಿಕಾರಿಯೊಬ್ಬರು ಉತ್ತರ ಪ್ರದೇಶದ ಅಲಹಾಬಾದ್‍ನ ಹೋಟೆಲ್‍ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದಿನ ಭಾರತದ ಆರ್ಥಿಕ ಪರಿಸ್ಥಿತಿಗೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕಾರಣ ಎಂದು ಪತ್ರ ಬರೆದಿದ್ದಾರೆ.
55 ವರ್ಷದ ನಿವೃತ್ತ ವಾಯುಪಡೆಯ ಅಧಿಕಾರಿ ಬಿಜಾನ್ ದಾಸ್ ಅಲಹಾಬಾದ್‍ನ ಖುಲ್ದಾಬಾದ್ ಪ್ರದೇಶದ ಹೋಟೆಲ್ ರೂಮ್‍ನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಸೆಪ್ಟೆಂಬರ್ 6 ರಿಂದ ಬಿಜಾನ್ ದಾಸ್ ಅವರು ಪ್ರಯಾಗ್‍ನ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಆದರೆ ಭಾನುವಾರ ತಮ್ಮ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಇಡೀ ದಿನ ದಾಸ್ ಕೋಣೆಯಿಂದ ಹೊರಗೆ ಬಂದಿಲ್ಲ ಎಂದು ಕೆಲಸ ಮಾಡುವವರು ಮ್ಯಾನೇಜರ್ ಅವರಿಗೆ ತಿಳಿಸಿದ್ದಾರೆ. ಸಂಜೆಯಾದರೂ ಬಾರದೇ ಇದ್ದಾಗ ಸಿಬ್ಬಂದಿ ಕೋಣೆಯ ಕಿಟಿಕಿಯಿಂದ ನೋಡಿದಾಗ ಅವರು ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ.
Advertisement
Advertisement
ನಂತರ ಒಳಗೆ ಹೋಗಿ ನೋಡಿದಾಗ ಅವರಿಗೆ ಡೆತ್ ನೋಟ್ ಸಿಕ್ಕಿದೆ. 5 ಪುಟಗಳ ಸುದೀರ್ಘ ಪತ್ರ ಬರೆದಿರುವ ಮಾಜಿ ಐಎಎಫ್ ಅಧಿಕಾರಿ ಬಿಜಾನ್ ದಾಸ್, ಆ ಪತ್ರದಲ್ಲಿ ದೇಶದ ಪ್ರಸ್ತುತ ಆರ್ಥಿಕ ಸ್ಥಿತಿಗೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ದೂಷಿಸಿದ್ದಾರೆ ಮತ್ತು ಮಂದಗತಿಗೆ ಸಾಗುತ್ತಿರುವ ಭಾರತದ ಆರ್ಥಿಕ ಪರಿಸ್ಥಿತಿಗೆ ಮೋದಿ ಸರ್ಕಾರವನ್ನು ದೂಷಿಸಬಾರದು ಎಂದು ಹೇಳಿದ್ದಾರೆ.
Advertisement
ನಾವು ಈ ಹಿಂದೆ ಮಾಡಿರುವ ತಪ್ಪುಗಳು ನಮ್ಮ ದೇಶದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿವೆ. ಇದ್ದರಿಂದ ಈಗಿನ ದೇಶದ ಆರ್ಥಿಕ ಪರಿಸ್ಥಿತಿಗೆ ಮೋದಿ ಅವರ ಸರ್ಕಾರ ಹೊಣೆಯಲ್ಲ. ಈ ಸರ್ಕಾರವನ್ನು ದೂಷಿಸುವುದು ತಪ್ಪು. ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ಆರ್ಥಿಕತೆಯ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಈಗ ಸೃಷ್ಟಿಯಾಗಿರುವ ಸಮಸ್ಯೆ ತಾತ್ಕಾಲಿಕ. ಈಗಿನ ಆರ್ಥಿಕ ಪರಿಸ್ಥಿತಿಗೆ ಹಿಂದಿನ ಸರ್ಕಾರ ಮತ್ತು ಆಗಿನ ಹಣಕಾಸು ಸಚಿವ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ.
Advertisement
ಈ ಪತ್ರದಲ್ಲಿ ತನ್ನ ವೈಯಕ್ತಿಕ ವೈಫಲ್ಯಗಳ ಬಗ್ಗೆ ಬರೆದಿರುವ ಬಿಜಾನ್ ದಾಸ್ ಅವರು, ತಮ್ಮ ಚಿಕ್ಕ ಮಗನಿಗಾಗಿ ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅವನು ಗಾಯಕ ಮತ್ತು ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಭಾಗವಹಿಸಿದ್ದನು. ಗಾಯಕನಾಗುವ ಕನಸುಗಳನ್ನು ಪೂರ್ಣ ಮಾಡಲು ತಮ್ಮ ಮಗ ವಿವೇಕ್ ದಾಸ್ ಅವರಿಗೆ ಸಹಾಯ ಮಾಡುವಂತೆ ಪಿಎಂ ಮೋದಿಯವರನ್ನು ಬಿಜನ್ ದಾಸ್ ಕೇಳಿಕೊಂಡಿದ್ದಾರೆ.
ತನ್ನ ಮಗ ತನ್ನ ದೇಹವನ್ನು ನೋಡಬೇಕೆಂದು ನಾನು ಬಯಸುವುದಿಲ್ಲವಾದ್ದರಿಂದ ತನ್ನ ಶವಸಂಸ್ಕಾರಕ್ಕಾಗಿ ತನ್ನ ಕುಟುಂಬವನ್ನು ಕರೆಯದಂತೆ ಅಲಹಾಬಾದ್ ಆಡಳಿತವನ್ನು ಕೋರಿಕೊಂಡಿದ್ದಾರೆ. ನನ್ನ ಶವವನ್ನು ಅಲಹಾಬಾದ್‍ನಲ್ಲಿಯೇ ಹೂಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪೊಲೀಸರು ಕುಟುಂಬವನ್ನು ಸಂಪರ್ಕಿಸಿದ್ದಾರೆ.
ಈ ಪತ್ರದ ಜೊತೆಗೆ ಸ್ವಂತ ಶವ ಸಂಸ್ಕಾರಕ್ಕಾಗಿ 1500 ರೂ ಮತ್ತು ರೂಮ್‍ಗೆ ಬಾಕಿ ಕೊಡಬೇಕಾದ 500 ರೂಗಳನ್ನು ಬಿಜಾನ್ ದಾಸ್ ಇಟ್ಟಿದ್ದಾರೆ. ಭಾರತದ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣದಿಂದಾಗಿ ಅಂತ್ಯಸಂಸ್ಕಾರ ಮಾಡುವವರಿಗೆ ಹೆಚ್ಚಿನ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ದಾಸ್ ಪತ್ರದಲ್ಲಿ ಬರೆದಿದ್ದಾರೆ.