ಲಕ್ನೋ: ಉತ್ತರ ಪ್ರದೇಶದ ಮಿರ್ಜಾಪುರ ಠಾಣೆಗೆ ಬಿಜೆಪಿ ಮಾಜಿ ಸಂಸದರೊಬ್ಬರು ಸಹಚರರೊಂದಿಗೆ ನುಗ್ಗಿ ಕರ್ತವ್ಯನಿರತ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ರಾಮ ಸಕಲ ಪೊಲೀಸರನ್ನು ನಿಂದಿಸಿದ ಬಿಜೆಪಿ ಮಾಜಿ ಸಂಸದ. ಶುಕ್ರವಾರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದರು. ವ್ಯಕ್ತಿ ಬಿಜೆಪಿ ಮೂಲದವನು ಆಗಿದ್ದರಿಂದ ಮಾಜಿ ಸಂಸದರು ನೇರವಾಗಿ ತಮ್ಮ ಬೆಂಬಲಿಗರೊಂದಿಗೆ ಠಾಣೆಗೆ ನುಗ್ಗಿದ್ದಾರೆ.
ಈ ವೇಳೆ ರಾಮ್ ಸಕಲ ಕರ್ತವ್ಯದಲ್ಲಿದ್ದ ಎಲ್ಲ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವ ಮೂಲಕ ಬೆದರಿಕೆ ಹಾಕಿದ್ದಾರೆ. ರಾಜ್ಯ ಹಾಗು ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ ಎಚ್ಚರಿಕೆ ಅಂತಾ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸರು ಮಧ್ಯಸ್ಥಿಕೆ ಮಾಡಿ ಗಲಾಟೆಗೆ ಪೂರ್ಣ ವಿರಾಮ ಹಾಕಿದ್ದಾರೆ. ಆದ್ರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ರಾಮ ಸಕಲ ವಿರುದ್ಧ ದೂರು ದಾಖಲಾಗಿದೆ.
https://youtu.be/16Zmk_xtyYo