ಲಕ್ನೋ: ಉತ್ತರ ಪ್ರದೇಶದಲ್ಲಿ ಇಂದು 55 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಈ ಮಧ್ಯೆ ಯೋಗಿ ಆದಿತ್ಯನಾಥ್ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ನೀಡಿದ್ದ 80% ವರ್ಸಸ್ 20% ಹೇಳಿಕೆ ಧರ್ಮ ಆಧರಿತವಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಇಂದು ನ್ಯೂಸ್ ಏಜೆನ್ಸಿ ಎಎನ್‍ಐ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸ್ಪಷ್ಟನೆ ನೀಡಿದರು. 80% ವರ್ಸಸ್ 20% ಧರ್ಮ ಆಧಾರಿತವಾಗಿರಲಿಲ್ಲ, 80% ಬಿಜೆಪಿ ಬೆಂಬಲಿಗರು, 20% ವಿಪಕ್ಷಗಳನ್ನು ಬೆಂಬಲಿಸುವ ಜನರು ಎನ್ನುವ ರಾಜಕೀಯ ಅರ್ಥದಲ್ಲಿ ನಾನು ಮಾತನಾಡಿದ್ದೆ ಎಂದು ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದರು.
Advertisement
Advertisement
80 ಪ್ರತಿಶತ ಜನರು ಎಂದರೆ, ಭದ್ರತೆಗಾಗಿ ಸರ್ಕಾರದ ಕಾರ್ಯಸೂಚಿಯಿಂದ ಸಂತೋಷವಾಗಿರುವವರು. ಸರ್ಕಾರದ ಜನಪರ ಹಾಗೂ ಬಡವರ ಪರ ಕೆಲಸಗಳಿಂದ ಸಂತಸಗೊಂಡವರು. ಅಭಿವೃದ್ಧಿಯನ್ನು ಇಷ್ಟಪಡುವವರು ಮತ್ತು ಗಮನಾರ್ಹ ಬದಲಾವಣೆಯನ್ನು ಅನುಭವಿಸಿದವರು ರಾಜ್ಯ ಸರ್ಕಾರದ ಎಲ್ಲಾ ಉತ್ತಮ ಕಾರ್ಯಗಳನ್ನು ಬೆಂಬಲಿಸುವ ಜನರು ಎಂದರು. ಇದನ್ನೂ ಓದಿ: ಒಡಹುಟ್ಟಿದವರೇ ಕಾಂಗ್ರೆಸ್ ನಾಶ ಮಾಡ್ತಾರೆ, ಚಿಂತಿಸಬೇಡಿ: ಯೋಗಿ ಆದಿತ್ಯನಾಥ್
Advertisement
20%ರಷ್ಟು ಜನರು ಯಾವಾಗಲೂ ವಿರೋಧಿಸಲು ಬಯಸುವವರನ್ನು ಒಳಗೊಂಡಿದೆ. ಅವರು ಮೊದಲು ವಿರೋಧಿಸುತ್ತಿದ್ದರು ಮತ್ತು ಈಗಲೂ ವಿರೋಧಿಸುತ್ತಿದ್ದಾರೆ. ಅವರು ನಕಾರಾತ್ಮಕ ಮನಸ್ಥಿತಿಯನ್ನು ಹೊಂದಿದ್ದಾರೆ. ಮಾಫಿಯಾ ಮತ್ತು ಅಪರಾಧಿಗಳನ್ನು ಬೆಂಬಲಿಸುತ್ತಾರೆ ಎಂದು ವಿವರಿಸಿದರು. ಇದನ್ನೂ ಓದಿ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ – ಪ್ರಮುಖ ಆರೋಪಿ ಆಶಿಶ್ ಮಿಶ್ರಾ ನಾಳೆ ಬಿಡುಗಡೆ
Advertisement
ಪಶ್ಚಿಮ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಯೋಗಿ ಆದಿತ್ಯನಾಥ್ 80% ವರ್ಸಸ್ 20% ಹೇಳಿಕೆ ನೀಡಿದ್ದರು. 80% ಹಿಂದೂಗಳು 20% ಅಲ್ಪ ಅಂಖ್ಯಾತರ ನಡುವಿನ ಹೋರಾಟದ ಹೇಳಿಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು. ಜಾಟ್, ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಈ ಪ್ರದೇಶದಲ್ಲಿ ಹಿಂದೂ ಮತಗಳ ಕ್ರೋಢೀಕರಣಕ್ಕೆ ಯೋಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.