ಲಕ್ನೋ: ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷಗಳು ಪರಸ್ಪರ ಟೀಕಾಪ್ರಹಾರ ನಡೆಸುತ್ತಿವೆ. ಸಮಾಜದವಾದಿ ಪಕ್ಷದವರು ಜಿನ್ನಾನ ಆರಾಧಕರು ಎಂದು ಟ್ವೀಟ್ ಮಾಡಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.
ಅವರು (ಎಸ್‌ಪಿ) ಜಿನ್ನಾ ಆರಾಧಕರು, ಆದರೆ ನಾವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಆರಾಧಕರು. ಪಾಕಿಸ್ತಾನ ಅವರಿಗೆ ಪ್ರಿಯವಾಗಿದೆ. ನಾವು ಭಾರತ ಮಾತೆಗಾಗಿ ನಮ್ಮ ಜೀವನವನ್ನು ತ್ಯಾಗ ಮಾಡುತ್ತೇವೆ ಎಂದು ಪಾಕಿಸ್ತಾನ ನಿರ್ಮಾತೃ ಮೊಹಮ್ಮದ್ ಆಲಿ ಜಿನ್ನಾರನ್ನು ಉಲ್ಲೇಖಿಸಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಮಾನತು ಆದೇಶ ರದ್ದು – ಮಹಾರಾಷ್ಟ್ರದ 12 ಬಿಜೆಪಿ ಶಾಸಕರಿಗೆ ಗೆಲುವು
Advertisement
Advertisement
ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬರಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಧ್ರುವೀಕರಣದಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲ ದಿನಗಳ 80 ವರ್ಸಸ್ 20 ಅಂದರೆ ಹಿಂದೂ ಮತ್ತು ಮುಸ್ಲಿಂ ಮತದಾರರು ಎಂದು ಯೋಗಿ ಹೇಳಿಕೆ ನೀಡಿದ್ದರು. ಶೇ.80 ಮತದಾರರು ಬಿಜೆಪಿ ಪರವಾಗಿದ್ದಾರೆ ಎಂದಿದ್ದರು.
Advertisement
वे 'जिन्ना' के उपासक है, हम 'सरदार पटेल' के पुजारी हैं।
उनको पाकिस्तान प्यारा है, हम माँ भारती पर जान न्योछावर करते हैं।
— Yogi Adityanath (@myogiadityanath) January 28, 2022
Advertisement
ಹಿಂದೆ ಗಾಜಿಯಾಬಾದ್‌ನಲ್ಲಿ ಹಜ್ ಗೃಹಗಳನ್ನು ನಿರ್ಮಿಸಲಾಗುತ್ತಿತ್ತು. ನಮ್ಮ ಸರ್ಕಾರ ಕೈಲಾಸ ಮಾನಸ ಸರೋವರ ಭವನವನ್ನು ನಿರ್ಮಿಸಿದೆ ಎಂದು ಕೂಡ ಯೋಗಿ ಧ್ರುವೀಕರಣದ ಮಾತುಗಳನ್ನಾಡಿದ್ದರು. ಇದನ್ನೂ ಓದಿ: ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನಲ್ಲಿ ಹಿಜಬ್ ಧರಿಸಲು ಅವಕಾಶವಿಲ್ಲ: ಕೇರಳ ಸರ್ಕಾರ
ಫೆ.10ರಿಂದ ವಿವಿಧ ಹಂತಗಳಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾ.10ರಂದು ಫಲಿತಾಂಶ ಹೊರಬೀಳಲಿದೆ.