ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಲೆಯ ಮುಂದೆ ಕಾಂಗ್ರೆಸ್ ಧೂಳಿಪಟವಾಗಿದೆ. ಸ್ಪಷ್ಟ ಬಹುಮತ ಪಡೆಯುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಸಿದ್ಧವಾದರೆ ಇತ್ತ ಕಳಪೆ ಸಾಧನೆಯ ಮೂಲಕ ಕಾಂಗ್ರೆಸ್‍ಗೆ ಬಾರಿ ಮುಖಭಂಗವಾಗಿದೆ.
Advertisement
ಈ ಬಾರಿ ಕಾಂಗ್ರೆಸ್ 2 ಸೀಟ್ ಗೆದ್ದು ಅತ್ಯಂತ ಕಳಪೆ ಸಾಧನೆ ಮಾಡಿದೆ. ಅಲ್ಲದೇ ಈ ಹಿಂದಿನ ಅಂಕಿಅಂಶಗಳನ್ನು ಗಮನಿಸಿದಾಗಲೂ ಕಾಂಗ್ರೆಸ್ ಕಳಪೆ ಸಾಧನೆ ಮುನ್ನಲೆಗೆ ಬರುತ್ತಿದೆ. 1985ರ ಬಳಿಕ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ 50ಕ್ಕಿಂತ ಹೆಚ್ಚು ಸೀಟ್ ಗೆದ್ದಿರುವ ಇತಿಹಾಸವಿಲ್ಲ. ಈ ಬಾರಿ ಮತ್ತೆ ಒಂದಂಕಿ ಮೊತ್ತಕ್ಕೆ ಇಳಿದಿದೆ. ಇದನ್ನೂ ಓದಿ: ಸ್ಥಳೀಯ ನಾಯಕತ್ವ ಮುಖ್ಯ ಅಲ್ಲ, ಅಜೆಂಡಾ ಮುಖ್ಯ: ಕರ್ನಾಟಕದ ಮೇಲೆ ಪರಿಣಾಮ ಏನು?
Advertisement
ವರ್ಷ- ಶಾಸಕರು
2022 – 2
2017 – 7
2012 – 28
2007 – 22
2002- 25
1996 – 33
1991 – 46
1985 – 269
1980 – 309
1977 – 47
Advertisement
Advertisement
ಈ ಬಾರಿ ಎಕ್ಸಿಟ್ ಪೋಲ್‌ಗಳು ಹೇಳಿದಂತೆಯೇ ಯೋಗಿ-ಮೋದಿ ಜೋಡಿ ಉತ್ತರ ಪ್ರದೇಶದಲ್ಲಿ ಅದ್ವಿತೀಯ ಎನಿಸುವಷ್ಟರ ಮಟ್ಟಿಗೆ ಮೋಡಿ ಮಾಡಿದೆ. ಕಳೆದ ಬಾರಿಯಷ್ಟು ಸೀಟ್ ಗಳಿಸದೇ ಇದ್ದರೂ, ಭಾರೀ ಬಹುಮತ ಗಳಿಸಿದೆ. ಈ ಮೂಲಕ ಉತ್ತರ ಪ್ರದೇಶದ ಇತಿಹಾಸದಲ್ಲೇ 37 ವರ್ಷಗಳ ಬಳಿಕ ಮೊದಲ ಬಾರಿಗೆ, ಒಂದೇ ಪಕ್ಷ ಸತತ ಎರಡನೇ ಬಾರಿ ಅಧಿಕಾರವನ್ನು ಕೈವಶ ಮಾಡಿಕೊಂಡಿದೆ. ಇದನ್ನೂ ಓದಿ: ಜನರು ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನ ಗೆಲ್ಲಿಸಿದ್ದಾರೆ: ಯೋಗಿ
ಮತ್ತೆ ಯೋಗಿ ಸರ್ಕಾರ್:
ಒಟ್ಟು ಸ್ಥಾನಗಳು 403, ಬಹುಮತಕ್ಕೆ 202
ಬಿಜೆಪಿ – 253
ಅಪ್ನಾದಳ – 11
ನಿಷಾದ್ – 06
ಎಸ್‍ಪಿ – 114
ಆರ್‍ಎಲ್‍ಡಿ – 09
ಎಸ್‍ಬಿಎಸ್‍ಪಿ – 05
ಬಿಎಸ್‍ಪಿ – 01
ಕಾಂಗ್ರೆಸ್ – 02
ಎಂಐಎಂ – 00
ಇತರರು – 00