ನವದೆಹಲಿ: ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ, ಭಾರತದ ಅತಿ ಎತ್ತರದ ಮನುಷ್ಯ ಧರ್ಮೇಂದ್ರ ಪ್ರತಾಪ್ ಸಿಂಗ್ ಅವರು ಶನಿವಾರ ಸಮಾಜವಾದಿ ಪಕ್ಷವನ್ನು ಸೇರಿದ್ದಾರೆ.
ಉತ್ತರ ಪ್ರದೇಶದ ಪ್ರತಾಪಗಢದವರಾದ ಧರ್ಮೇಂದ್ರ ಸಿಂಗ್ ಅವರು 8.1 ಅಡಿ (2.4 ಮೀ.) ಎತ್ತರ ಇದ್ದಾರೆ. ಭಾರತದ ಅತಿ ಎತ್ತರದ ಮನುಷ್ಯರಾಗಿರುವ ಇವರು ವಿಶ್ವ ದಾಖಲೆಗೆ ಕೇವಲ 11 ಸೆ.ಮೀ.ನಿಂದ ವಂಚಿತರಾಗಿದ್ದರು. ಇದನ್ನೂ ಓದಿ: ಬಿಜೆಪಿಗೆ ಮತ್ತೊಂದು ಶಾಕ್ – ಗೋವಾ ಮಾಜಿ ಸಿಎಂ ಪರ್ಸೇಕರ್ ರಾಜೀನಾಮೆ
Advertisement
Advertisement
ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಈ ಕುರಿತು ಮಾತನಾಡಿ, ಸಿಂಗ್ ಅವರು ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಅವರ ಆಗಮನದಿಂದ ಸದ್ಯದಲ್ಲೇ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೆ ಪಕ್ಷಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
ಸಮಾಜವಾದಿ ಪಕ್ಷದ ನೀತಿಗಳು ಮತ್ತು ಅಖಿಲೇಶ್ ಯಾದವ್ ಅವರ ನಾಯಕತ್ವದಲ್ಲಿ ನಂಬಿಕೆಯಿಟ್ಟು ಪ್ರತಾಪಗಢದ ಧರ್ಮೇಂದ್ರ ಪ್ರತಾಪ್ ಸಿಂಗ್ ಪಕ್ಷವನ್ನು ಸೇರಿದ್ದಾರೆ. ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮವಹಿಸುವುದಾಗಿಯೂ ಅವರು ತಿಳಿಸಿದ್ದಾರೆ. ಸಿಂಗ್ ಅವರಿಗೆ ಅಭಿನಂದನೆಗಳು ಎಂದು ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಹೇಳಿದ್ದಾರೆ. ಇದನ್ನೂ ಓದಿ: ಪಂಚರಾಜ್ಯಗಳಲ್ಲಿ ಚುನಾವಣಾ ರ‍್ಯಾಲಿ, ರೋಡ್ ಶೋ ಗಳಿಗೆ ಜ.31ರ ವರೆಗೆ ನಿರ್ಬಂಧ
Advertisement
ಎತ್ತರ ಇರುವ ಕಾರಣದಿಂದಾಗಿಯೇ ಸಿಂಗ್ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದಾರೆ. ಹೊರಗಡೆ ಓಡಾಡುತ್ತಿದ್ದರೆ ಜನರ ಗಮನ ಅವರ ಕಡೆಗೆ ಇರುತ್ತದೆ. ಎಷ್ಟೋ ಕಡೆ ಜನ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿರುತ್ತಾರಂತೆ.
ನನ್ನ ಎತ್ತರದ ಕಾರಣಕ್ಕೆ ನಾನು ಜನಪ್ರಿಯನಾಗಿದ್ದೇನೆ. ಜನ ನನ್ನೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಎಷ್ಟೋ ಸಂದರ್ಭಗಳುಂಟು. ಅದನ್ನು ನಾನು ಸೆಲೆಬ್ರಿಟಿಯಂತೆ ಸ್ವೀಕರಿಸಿದ್ದೇನೆ ಎಂದು ಸಿಂಗ್ ಹೇಳಿಕೊಂಡಿದ್ದಾರೆ. ಫೆ.10ರಿಂದ ಮಾರ್ಚ್ 7ರವರೆಗೆ ವಿವಿಧ ಹಂತಗಳಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರಬೀಳಲಿದೆ.