ಲಕ್ನೋ: ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಕಾಂಗ್ರೆಸ್ ಇರುವುದು ತಮ್ಮ ಕುಟುಂಬದವರ ರಕ್ಷಣೆಗಾಗಿ ಮತ್ತು ರಾಜಪ್ರಭುತ್ವವನ್ನು ಪ್ರೋತ್ಸಾಹಿಸಲು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.
ಶಹಜಹನ್‌ಪುರದಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಡಬಲ್ ಎಂಜಿನ್ ಸರ್ಕಾರ ಡಬಲ್ ವೇಗದಲ್ಲಿ ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬದೊಳಗೆ ಹೊಸ ಜಿಲ್ಲೆಗಳ ರಚನೆ: ಜಗನ್ ಮೋಹನ್ ರೆಡ್ಡಿ
Advertisement
Advertisement
ಎಸ್‌ಪಿ, ಬಿಜೆಪಿ, ಕಾಂಗ್ರೆಸ್ ತಮ್ಮ ಕುಟುಂಬದವರಿಗಾಗಿ ಇದೆ. ನಾವು ರಾಷ್ಟ್ರವಾದದ ಬಗ್ಗೆ ಮಾತನಾಡಿದರೆ ಅವರು ಜಾತಿವಾದದ ಬಗ್ಗೆ ಮಾತನಾಡುತ್ತಾರೆ. ನಾವು ಅಭಿವೃದ್ಧಿ ಕುರಿತು ಮಾತನಾಡಿದರೆ, ಅವರು ಧರ್ಮ ಮತ್ತು ಸ್ಮಶಾನಗಳ ಬಗ್ಗೆ ಮಾತನಾಡುತ್ತಾರೆ. ನಾವು ಕಬ್ಬಿನ ಬಗ್ಗೆ ಮಾತನಾಡಿದರೆ ಅವರು ಜಿನ್ನಾ ಬಗ್ಗೆ ಮಾತನಾಡುತ್ತಾರೆ ಎಂದು ಕುಟುಕಿದ್ದಾರೆ.
Advertisement
ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕೋವಿಡ್-19 ಲಸಿಕೆ ಅಪಪ್ರಚಾರ ಮಾಡುವವರು, ಅಪರಾಧವನ್ನು ಉತ್ತೇಜಿಸುವ, ಮಾಫಿಯಾ ರಾಜ್‌ಗೆ ಪ್ರೋತ್ಸಾಹ ನೀಡುವವರಿಗೆ ಮತ ಹಾಕಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ತಮ್ಮದೇ ಆದ ನೈತಿಕ ಜವಾಬ್ದಾರಿ ಇದೆ: ಆಶಿಶ್ ಮಿಶ್ರಾ ಜಾಮೀನಿಗೆ ಪ್ರಿಯಾಂಕಾ ಕಿಡಿ
Advertisement
ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ (ಅಖಿಲೇಶ್ ಯಾದವ್) ಎಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂದು ನಾನು ಕೇಳಿದೆ. ಅವರು ಸ್ಮಶಾನಗಳ ಗೋಡೆಗಳನ್ನು ಮಾಡಿದ್ದಾರಂತೆ. ಇಂದು ಬಿಜೆಪಿ 1 ಕೋಟಿ ಯುವಕರಿಗೆ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ವಿತರಿಸುತ್ತಿರುವಾಗ, ಸಮಾಜವಾದಿ ಪಕ್ಷವು ಈ ಗ್ಯಾಜೆಟ್‌ಗಳನ್ನು ಯುವಕರಿಗೆ ವಿತರಿಸಬಾರದು ಎಂದು ಚುನಾವಣಾ ಆಯೋಗಕ್ಕೆ ವರದಿ ನೀಡಿದೆ. ಚಿಂತಿಸಬೇಡಿ, ನಾವು ಮತ್ತೆ ಅಧಿಕಾರಕ್ಕೆ ಬಂದರೆ ಖಂಡಿತಾ ನೀಡುತ್ತೇವೆ. ಅದನ್ನು 2 ಕೋಟಿ ಯುವಕರಿಗೆ ವಿತರಿಸುತ್ತೇವೆ. ನಮ್ಮ ಯುವಕರು ಬುದ್ಧವಂತರಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.