ಲಕ್ನೋ: ಸಮಾಜವಾದಿ ಪಕ್ಷದಲ್ಲಿ ಟಿಕೆಟ್ ನಿರಾಕರಿಸಿರಿವುದರಿಂದ ಬಿಜೆಪಿಗೆ ಸೇರಿದ್ದೇನೆ ಎಂದು ಕೆಲವರು ನಂಬಿದ್ದಾರೆ. ಆದರೆ ನಾನು ರಾಷ್ಟ್ರೀಯತೆಗಾಗಿ ಬಿಜೆಪಿಯನ್ನು ಸೇರಿದ್ದೇನೆ ಎಂದು ಇತ್ತೀಚೆಗೆ ಬಿಜೆಪಿಗೆ ಸೇರಿದ್ದ ಯಾದವ್ ಕುಟುಂಬದ ಸೊಸೆ ಅಪರ್ಣಾ ಯಾದವ್ ತಿಳಿಸಿದರು.
ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿಂತನೆ ಹಾಗೂ ನೀತಿಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಇದರಿಂದಾಗಿ ನಾನು ಬಿಜೆಪಿಗೆ ಸೇರಿದ್ದೇನೆ ಎಂದು ಹೇಳಿದರು.
Advertisement
Advertisement
ಈ ಹಿಂದೆ ಅಪರ್ಣಾ ಯಾದವ್ ಅವರು ಬಿಜೆಪಿಗೆ ಸೇರಿರುವುದರ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಅಖಿಲೇಶ್ ಯಾದವ್ ಅವರು, ನಮಗೆ ಟಿಕೆಟ್ ನೀಡಲು ಸಾಧ್ಯವಾಗದವರಿಗೆ ಬಿಜೆಪಿ ಟಿಕೆಟ್ ನೀಡುತ್ತಿದೆ. ಇದರಿಂದ ಬಿಜೆಪಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ವ್ಯಂಗ್ಯವಾಡಿದ್ದರು.
Advertisement
Advertisement
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಸೊಸೆ ಹಾಗೂ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸಹೋದರನ ಪತ್ನಿ ಅಪರ್ಣಾ ಯಾದವ್ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದು, ಉತ್ತರಪ್ರದೇಶ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದನ್ನೂ ಓದಿ: ಸೂಪರ್ ಹೀರೋ ರೂಪತಾಳಿದ ಚರಣ್‍ಜಿತ್ ಸಿಂಗ್ ಚನ್ನಿ
ಅಪರ್ಣಾ ಯಾದವ್ 2017ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಲಕ್ನೋ ಕ್ಯಾಂಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಿತಾ ಬಹುಗುಣ ಜೋಶಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಅದಾದ ಬಳಿಕ ಬಿಜೆಪಿ ಪಕ್ಷದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅಪರ್ಣಾ ಯಾದವ್ ಒಲವು ಹೊಂದಿದ್ದರು. ಕೆಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದರು. ಇದನ್ನೂ ಓದಿ: ಆತ್ಮನಿರ್ಭರ್ ಭಾರತಕ್ಕೆ ಹೊಸ ರೂಪ ನೀಡಿದ ದೆಹಲಿ ಮೆಟ್ರೋ