ಲಕ್ನೋ: ಮನೆ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಯುವತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಚಂದೌಲಿ ಜಿಲ್ಲೆಯ ಮನರಾಜ್ ಪುರದಲ್ಲಿ ನಡೆದಿದೆ.
ಮೃತಳನ್ನು ನಿಶಾ ಯಾದವ್ ಎಂದು ಗುರುತಿಸಲಾಗಿದೆ. ನಿಶಾ ಮೃತಪಟ್ಟ ಬಳಿಕ ಪ್ರತಿಭಟನೆಗಳು ನಡೆದಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಲಾಯಿತು.
Advertisement
Advertisement
ನಿಶಾ ಯಾದವ್ ಸಹೋದರ ಕನ್ಹಯ್ಯಾ ಯಾದವ್ ರೌಡಿಶೀಟರ್ ಆಗಿದ್ದು, ಆತನನ್ನು ಬಂಧಿಸಲೆಂದು ಪೊಲೀಸರು ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ನಿಶಾಳಿಗೆ ಥಳಿಸಿದ್ದಾರೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎಂದು ನಿಶಾ ಸಹೋದರಿ ಗಂಭೀರ ಆರೋಪ ಮಾಡಿದ್ದಾಳೆ. ಇದನ್ನೂ ಓದಿ: ಓರ್ವ ಅಪ್ರಾಪ್ತ ಸೇರಿ ಮೂವರಿಂದ ಗರ್ಭಿಣಿ ಮೇಲೆ ಅತ್ಯಾಚಾರ – 24 ಗಂಟೆಯಲ್ಲಿ 2ನೇ ರೇಪ್
Advertisement
ಸದ್ಯ ಕುಟುಂಬಸ್ಥರ ದೂರಿನ ಆಧಾರದ ಮೇಲೆ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಆದೇಶಿಸಲಾಗಿದೆ. ಸೈಯದ್ ರಾಜಾ ಪೊಲೀಸ್ ಠಾಣೆಯ ಎಸ್‍ಎಚ್‍ಓ ಅವರನ್ನು ಅಮಾನತುಗೊಳಿಸಲಾಗಿದೆ. ಇತ್ತ ವಾರಣಾಸಿಯ ಮಣಿಕರ್ಣಿಕಾ ಘಾಟ್ ನಲ್ಲಿ ನಿಶಾ ಅಂತ್ಯಕ್ರಿಯೆ ಇಂದು ನೆರವೇರಿಸಲಾಗಿದೆ.
Advertisement
ಘಟನೆ ಸಂಬಂಧ ಪೊಲೀಸರ ವಿರುದ್ಧ ಕಿಡಿಕಾರಿದ ಎಸ್‍ಪಿ ವಕ್ತಾರ ಅನುರಾಗ್ ಭಡೋರಿಯಾ, ಯುಪಿಯಲ್ಲಿ ಸಮವಸ್ತ್ರಧಾರಿ ಗೂಂಡಾಗಳು ಆಡಳಿತ ನಡೆಸುತ್ತಿದ್ದಾರೆ. ಚಾಂದೋಳಿಯಲ್ಲಿ ಪೊಲೀಸರು ಮನೆಗೆ ನುಗ್ಗಿ ಯುವತಿಯೊಬ್ಬಳಿಗೆ ಥಳಿಸಿ ಆಕೆಯ ಸಾವುಗೆ ಕಾರಣವಾಗಿರುವುದು ಖೇದಕರ ಎಂದು ಹೇಳಿದ್ದಾರೆ.