ಲಕ್ನೋ: ವಿಷ ಸೇವಿಸಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ಸುರೇಂದ್ರ ಕುಮಾರ್ ದಾಸ್ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.
ಪತ್ನಿಯೊಂದಿಗೆ ಜಗಳವಾಡಿದ್ದ ಸುರೇಂದ್ರ ಅವರು, ಜೀವನ ಅಂತ್ಯಗೊಳಿಸುವ ದಾರಿಗಳ ಬಗ್ಗೆ ತಮ್ಮ ಮೊಬೈಲ್ ಹಾಗೂ ಲ್ಯಾಪ್ ಟಾಪ್‍ನಲ್ಲಿ ಕೆಲ ದಿನಗಳಿಂದ ಗೂಗಲ್ ಸರ್ಚ್ ಮಾಡಿದ್ದರು ಎನ್ನುವುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು. 30 ವರ್ಷದ ಅಧಿಕಾರಿ ಸುರೇಂದ್ರ ಕುಮಾರ ದಾಸ್ ಅವರು ಆಗಸ್ಟ್ 9ರಂದು ಕಾನ್ಪುರ ಪೂರ್ವ ವಿಭಾಗದ ಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
Advertisement
IPS Surendra Kumar Das, posted with @Uppolice as SP Kanpur, was just 30!
We are deeply saddened by his tragic demise. A bright and affectionate officer, he shall be missed by all of us.
We join the family in their prayers in this hour of grief.
ॐ शांति। pic.twitter.com/N3gbxMPARz
— IPS Association (@IPS_Association) September 9, 2018
Advertisement
ಸೆಪ್ಟೆಂಬರ್ 5 ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ದಾಸ್ ಅವರನ್ನು ಪೇದೆಯೊಬ್ಬರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಅವರನ್ನು ಬದುಕಿಸಲು ಮುಂಬೈನಿಂದ ವೈದ್ಯರ ತಂಡವನ್ನು ಕರೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಾಸ್ ಅವರು ಮೃತಪಟ್ಟಿದ್ದಾರೆ.
Advertisement
ವಿಷ ಕಿಡ್ನಿಯ ಮೇಲೆ ಪ್ರಭಾವ ಬೀರಿದ್ದು, ದೇಹದ ಎಲ್ಲ ಅಂಗಗಳೂ ಬಹುತೇಕ ಕಾರ್ಯ ಸ್ಥಗಿತಗೊಳಿಸಿವೆ ಎಂದು ಶನಿವಾರವೇ ಆಸ್ಪತ್ರೆಯ ಹಿರಿಯ ವೈದ್ಯ ರಾಜೇಸ್ ಅಗರವಾಲ್ ತಿಳಿಸಿದ್ದರು.
Advertisement
Kanpur: IPS Surendra Kumar dies after he allegedly consumed poison at his residence yesterday. CMO Regency Hospital Rajesh Agrawal (in pic) says, "He passed away at 12:19 pm due to celphos poisoning. We tried our best to revive him but we could not save him." pic.twitter.com/5eJUu5EM3J
— ANI UP/Uttarakhand (@ANINewsUP) September 9, 2018
ಶನಿವಾರ ಉತ್ತರ ಪ್ರದೇಶ ರಾಜ್ಯದ ಡಿಜಿಪಿ ಓ.ಪಿ.ಸಿಂಗ್ ಕೂಡಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇನ್ನು ಸುರೇಂದ್ರ ಅವರ ಸಾವಿನ ಸುದ್ದಿ ತಿಳಿಸಿಯುತ್ತಿದ್ದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv