– ಹೈಕಮಾಂಡ್‌ಗೆ ಶೀಘ್ರವೇ ಪಟ್ಟಿ ರವಾನೆ
ಲಕ್ನೋ: ಉತ್ತರ ಪ್ರದೇಶದ (Uttar Pradesh) ಉಪಚುನಾವಣೆಗೆ (UP Bypolls) 10 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಮಾಡಲು ತಲಾ ಮೂರು ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ, ಒಂಬತ್ತು ಸ್ಥಾನಗಳಿಗೆ ತಲಾ ಮೂರು ಆಕಾಂಕ್ಷಿಗಳ ಹೆಸರುಗಳನ್ನು ನಿರ್ಧರಿಸಲಾಗಿದೆ. ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಿಜೇಶ್ ಪಾಠಕ್, ಯುಪಿ ಬಿಜೆಪಿ ಮುಖ್ಯಸ್ಥ ಭೂಪೇಂದ್ರ ಚೌಧರಿ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಧರಂಪಾಲ್ ಸಿಂಗ್ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರು ಭಾಗವಹಿಸಿದ್ದರು.
ಶಾರ್ಟ್‌ಲಿಸ್ಟ್ ಮಾಡಿದ 27 ಆಕಾಂಕ್ಷಿಗಳ ಹೆಸರುಗಳನ್ನು ಬಿಜೆಪಿಯ ಹೈಕಮಾಂಡ್‌ಗೆ ಕಳುಹಿಸಲಾಗುವುದು. ಹೈಕಮಾಂಡ್ 9 ಸ್ಥಾನಗಳಿಗೆ ಅಭ್ಯರ್ಥಿಗಳಾಗಿ ಅಂತಿಮ 9 ಹೆಸರುಗಳನ್ನು ಆಯ್ಕೆ ಮಾಡಲಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಶಾಸಕರು ಸಂಸದರಾಗಿ ಆಯ್ಕೆಯಾದ ನಂತರ ಉತ್ತರ ಪ್ರದೇಶದ 10 ಸ್ಥಾನಗಳಲ್ಲಿ 9 ತೆರವಾಗಿವೆ. ಅವುಗಳೆಂದರೆ ಮಿಲ್ಕಿಪುರ, ಕತೇಹಾರಿ, ಮಜ್ವಾನ್, ಫುಲ್ಪುರ್, ಖೈರ್, ಕುಂದರ್ಕಿ, ಮೀರಾಪುರ್, ಕರ್ಹಾಲ್ ಮತ್ತು ಗಾಜಿಯಾಬಾದ್ ಸ್ಥಾನಗಳಾಗಿವೆ. ಇನ್ನೂ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ಅವರನ್ನು ಅನರ್ಹಗೊಳಿಸಿದ ನಂತರ ಸಿಶಾಮೌ ಕ್ಷೇತ್ರಕ್ಕೆ ಉಪಚುನಾವಣೆ ಅಗತ್ಯವಾಗಿದೆ.
ಚುನಾವಣಾ ಆಯೋಗವು ಉತ್ತರ ಪ್ರದೇಶದ 10 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಬಹುದು. ನವೆಂಬರ್‌ನಲ್ಲಿ ಉಪಚುನಾವಣೆಗಳು ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ನಿಯಮದ ಪ್ರಕಾರ ಸ್ಥಾನಗಳು ಖಾಲಿಯಾದ ನಂತರ ಆರು ತಿಂಗಳೊಳಗೆ ಉಪಚುನಾವಣೆ ಅಗತ್ಯವಾಗಿ ನಡೆಸಬೇಕಾಗುತ್ತದೆ.