ಡೆಹ್ರಾಡೂನ್: ಹಾಲಿವುಡ್ ಸಿನಿಮಾದಿಂದ ಪ್ರೇರಿತಗೊಂಡು ಉತ್ತರಾಖಂಡ್‍ನ ಮೂರು ವಿಭಿನ್ನ ಬ್ಯಾಂಕ್‍ಗಳಲ್ಲಿ ಕಳ್ಳತನ ಮಾಡಿದ್ದ ಉತ್ತರ ಪ್ರದೇಶದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧನಕ್ಕೆ ಒಳಗಾದ ವ್ಯಕ್ತಿಯನ್ನು ಉತ್ತರ ಪ್ರದೇಶದ ಬಿಜ್ನೋರ್ ಮೂಲದ ವಿಕುಲ್ ರತಿ (31) ಎಂದು ಗುರುತಿಸಲಾಗಿದೆ. ಈತ ಯೂಟ್ಯೂಬ್‍ನಲ್ಲಿ ಹಾಲಿವುಡ್ ಸಿನಿಮಾ ನೋಡಿ ಆ ಸಿನಿಮಾಗಳ ರೀತಿಯಲ್ಲೇ ಕಳ್ಳತನ ಮಾಡಲು ಹೋಗಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ.
Advertisement
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ದಿಲೀಪ್ ಸಿಂಗ್ ಕುನ್ವಾರ್ ವಿಕುಲ್ ರತಿ ಯೂಟ್ಯೂಬ್‍ನಲ್ಲಿ ಹಾಲಿವುಡ್ ಸಿನಿಮಾ ನೋಡಿ ಅದೇ ರೀತಿಯಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾನೆ. ಅವನ ಯೋಜನೆಯಂತೆ ಬ್ಯಾಂಕ್ ಬೀಗ ಮುರಿದು ಒಳಗೆ ಬಂದಿದ್ದಾನೆ. ಆದರೆ ಹಣ ಇಟ್ಟಿದ್ದ ಸ್ಟ್ರಾಂಗ್ ರೂಮ್ ಬೀಗ ಮುರಿಯಲು ಅವನ ಕೈಯಲ್ಲಿ ಆಗಿರಲಿಲ್ಲ. ನಂತರ ಆತ ಹಣ ದೋಚಲಾಗದೆ ಬ್ಯಾಂಕ್‍ನಲ್ಲಿ ಇದ್ದ ಎರಡು ರೈಫಲ್ ಗಳನ್ನು ಎತ್ತಿಕೊಂಡು ಹೋಗಿದ್ದಾನೆ ಎಂದು ಹೇಳಿದ್ದಾರೆ.
Advertisement
ಆ ಎರಡು ರೈಫಲ್‍ಗಳು ಬ್ಯಾಂಕಿನ ಭದ್ರತಾ ಸಿಬ್ಬಂದಿಯಾಗಿದ್ದು ಸಿಸಿ ಕ್ಯಾಮೆರಾದಲ್ಲಿ ಈ ಎಲ್ಲಾ ದೃಶ್ಯವು ಸೆರೆಯಾಗಿದೆ. ಈ ಆಧಾರದ ಮೇಲೆ ತನಿಖೆ ನಡೆಸಿದಾಗ ಆರೋಪಿ ಇರುವ ಜಾಗ ಗೊತ್ತಾಗಿದೆ. ಆಗ ನಜೀಬಾಬಾದ್ ಪ್ರದೇಶದಲ್ಲಿ ಇದ್ದ ಆರೋಪಿ ರತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 2 ರೈಫಲ್ ಮತ್ತು ಅವನ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
ಆರೋಪಿ ರತಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ಮಾಡಿದ್ದಾರೆ ಈ ವೇಳೆ ರತಿ ಅವನ ಸ್ವಗ್ರಾಮವಾದ ಬಿಜ್ನೋರ್ ನಲ್ಲಿ ಇದಕ್ಕೂ ಮುಂಚೆ ಎರಡು ಬ್ಯಾಂಕ್‍ಗಳನ್ನು ಕಳ್ಳತನ ಮಾಡಿದ್ದೆ. ಅದೇ ರೀತಿ ಮಾಡಲು ಈ ಸಲ ಪ್ರಯತ್ನಿಸಿ ವಿಫಲನಾದೆ ಎಂದು ಒಪ್ಪಿಕೊಂಡಿದ್ದಾನೆ. ಇದರ ಜೊತೆಗೆ ಹಾಲಿವುಡ್ ಸಿನಿಮಾ ನೋಡಿ ಆ ರೀತಿಯಲ್ಲೇ ನಾನು ಕಳ್ಳತನ ಮಾಡುತ್ತಿದ್ದೆ ಎಂದು ಹೇಳಿದ್ದಾನೆ.
ಪೊಲೀಸರು ಹೇಳುವ ಪ್ರಕಾರ, ವಿಕುಲ್ ರತಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದು, ಅವನಿಗೆ 20 ಎಕ್ರೆ ಜಮೀನು ಇದೆ. ಆದರೆ ಖಾಸಗಿಯಾಗಿ 20 ಲಕ್ಷ ಸಾಲ ಮಾಡಿದ್ದ ರತಿ ಅದನ್ನು ತೀರಿಸಲು ಬ್ಯಾಂಕ್ ದರೋಡೆ ಮಾಡುತ್ತಿದ್ದ. ಸೆಪ್ಟಂಬರ್ 11 ಮತ್ತು 15 ರಂದು ತನ್ನದೇ ಊರಿನ ಎರಡು ಬ್ಯಾಂಕ್‍ಗಳನ್ನು ಕಳ್ಳತನ ಮಾಡಿದ್ದ ಎಂದು ಹೇಳಿದ್ದಾರೆ.