ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ಒಬ್ಬ ವ್ಯಕ್ತಿಯನ್ನೂ ಬಿಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಆದಿಲ್ ಚೌಧರಿ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆದ ವೀಡಿಯೋದಲ್ಲಿ ಏನಿದೆ?
ವೀಡಿಯೋದಲ್ಲಿ ಹೆಸರಿಲ್ಲದ ವ್ಯಕ್ತಿಯನ್ನು ಉಲ್ಲೇಖಿಸಿ ಆದಿಲ್ ಚೌಧರಿ, ಚಿಂತಿಸಬೇಡಿ, ದೇವರ ಇಚ್ಛೆಯಂತೆ ನಾವು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಸರ್ಕಾರವನ್ನು ರಚಿಸಲಿದ್ದೇವೆ. ಒಂದು ವೇಳೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಒಬ್ಬ ವ್ಯಕ್ತಿಯನ್ನು ಉಳಿಸಲಾಗುವುದಿಲ್ಲ. ಅವರು ನಮ್ಮ ವಿರುದ್ಧ ಅಪರಾಧ ಎಸಗುತ್ತಿರುವ ರೀತಿಯಲ್ಲಿ, ನಾವು ಸೇಡು ತೀರಿಸಿಕೊಳ್ಳುತ್ತೇವೆ. ಅವರು ಏನನ್ನಾದರೂ ಮಾಡುವ ಮೊದಲು 100 ಬಾರಿ ಯೋಚಿಸಬೇಕು ಹಾಗೆಯೇ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ
Advertisement
मेरठ दक्षिण से सपा उम्मीदवार आदिल चौधरी ने हिंदुओं को दी धमकी, कहा “हमारी सरकार आई तो छोड़ेंगे नहीं… चुनचुन कर बदला लिया जाएगा”
क्या अखिलेश ने नाहिद हसन, आदिल चौधरी जैसे हिंदू विरोधी गुंडो को ही टिकट दिया है? pic.twitter.com/37odJVVCRa
— Amit Malviya (@amitmalviya) January 25, 2022
Advertisement
ವೀಡಿಯೋಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್ ಮಾಳವಿಯಾ, ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಎಸ್ಪಿ ಅಭ್ಯರ್ಥಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಎಂದು ಆರೋಪಿಸಿದ್ದಾರೆ. ಆದರೆ ಚೌಧರಿ ವೀಡಿಯೊದಲ್ಲಿ ಯಾವುದೇ ಸಮುದಾಯದ ಬಗ್ಗೆ ಮಾತನಾಡಿರುವುದು ಕಂಡುಬಂದಿಲ್ಲ. ಮೀರತ್ ದಕ್ಷಿಣದ ಎಸ್ಪಿ ಅಭ್ಯರ್ಥಿ ಚೌಧರಿಯವರು ನಾವು ಸರ್ಕಾರ ರಚಿಸಿದರೆ ಅವರನ್ನು ಬಿಡುವುದಿಲ್ಲ. ಒಬ್ಬೊಬ್ಬರಾಗಿ ಸೇಡು ತೀರಿಸಿಕೊಳ್ಳುತ್ತೇವೆ ಅಂತ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
Advertisement
ನಾಹಿದ್ ಹಸನ್ ಮತ್ತು ಆದಿಲ್ ಚೌಧರಿ ಅವರಂತಹ ಹಿಂದೂ ವಿರೋಧಿ ಗೂಂಡಾಗಳು. ಚುನಾವಣಾ ಅಭ್ಯರ್ಥಿಗಳನ್ನು ಮಾತ್ರ ನಾಮನಿರ್ದೇಶನ ಮಾಡಿದ್ದಾರೆ. ಅವರು ವೀಡಿಯೊದಲ್ಲಿ ಮಾಡಿದ ಕಾಮೆಂಟ್ಗಳನ್ನು ಸ್ಪಷ್ಟಪಡಿಸಲು ಕೇಳಿದಾಗ ಚೌಧರಿಯವರು ನೇರ ಉತ್ತರವನ್ನು ನೀಡಲಿಲ್ಲ. ಬಿಜೆಪಿ ವೀಡಿಯೊವನ್ನು ಎಡಿಟ್ ಮಾಡಿದೆ ಅಂತ ಆರೋಪಿಸಿದ್ದಾರೆ. ಕೇಸರಿ ಪಕ್ಷವು ಅಗತ್ಯವಿರುವ ಯಾವುದೇ ವಿಧಾನಗಳನ್ನು ಬಳಸಲು ಸಮರ್ಥವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ
ಈ ಕುರಿತು ಮೀರತ್ ಸಿಟಿ ಎಸ್ಪಿ ವಿನೀತ್ ಭಟ್ನಾಗರ್ ಅವರು ಎಸ್ಪಿ ಅಭ್ಯರ್ಥಿ ಬೆದರಿಕೆ ಹಾಕುತ್ತಿರುವ ವೀಡಿಯೋದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ವಿಡಿಯೋವನ್ನು ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ಅದರಲ್ಲಿ ಚುನಾವಣಾ ಆಯೋಗದ ನೈತಿಕ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಹೇಳಿಕೆಗಳಿದ್ದರೆ, ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.