ಲಕ್ನೋ: ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವನ್ನು (ಬಿಎಸ್‍ಪಿ) ಕಡೆಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವರ ಹೇಳಿದ್ದಾರೆ. ಸತ್ಯವನ್ನು ಒಪ್ಪಿಕೊಂಡಿರುವುದು ಅಮಿತ್ ಶಾ ಅವರ ದೊಡ್ಡತನ ಎಂದು ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ, ಅಮಿತ್ ಶಾ ಅವರ ಕುರಿತಾಗಿ ಮೆಚ್ಚುಗೆಯ ಮಾತನಾಡಿದ್ದಾರೆ.
Advertisement
ಬಿಎಸ್‍ಪಿ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಆ ಪಕ್ಷಕ್ಕೆ ಮತ ಸಿಗುವ ನಂಬಿಕೆಯಿದೆ. ಆದರೆ ಎಷ್ಟು ಸೀಟುಗಳಾಗಿ ಪರಿವರ್ತನೆಯಾಗಲಿದೆ ಎಂಬುದು ಗೊತ್ತಿಲ್ಲ ಎಂದು ಈ ಅಮಿತ್ ಶಾ ಹೇಳಿದ್ದರು. ಈ ಹೇಳಿಕೆ ಕುರಿತಾಗಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಮಾಯಾವತಿ, ಸತ್ಯವನ್ನು ಒಪ್ಪಿಕೊಂಡಿರುವುದು ಅಮಿತ್ ಶಾ ಅವರ ದೊಡ್ಡತನ ಎಂದಿದ್ದಾರೆ.
Advertisement
ಬಿಎಸ್‍ಪಿ 2007ರಂತೆ ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದೆ. ಸಮಾಜದ ಎಲ್ಲ ವಿಭಾಗದವರಿಂದ ಬೆಂಬಲ ಸಿಗಲಿದೆ. ಸಮಾಜವಾದಿ ಪಕ್ಷದ ಕಾರ್ಯ ವೈಖರಿ ಬಗ್ಗೆ ಮುಸ್ಲಿಮರು ಅಸಮಾಧಾನಗೊಂಡಿದ್ದಾರೆ. ಬಿಎಸ್‍ಪಿಗೆ ದಲಿತರು ಮಾತ್ರವಲ್ಲದೆ ಮುಸ್ಲಿಂ, ಹಿಂದುಳಿದ ವರ್ಗ ಮತ್ತು ಮೇಲ್ಜಾತಿಯ ಬೆಂಬಲವಿದೆ. ಸಮಾಜವಾದಿ ಪಕ್ಷ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದು, ಆ ಕನಸು ಭಗ್ನವಾಗಲಿದೆ. ಎಸ್‍ಪಿ ಅಧಿಕಾರದಲ್ಲಿದ್ದಾಗ ದಲಿತರು, ಹಿಂದುಳಿದ ವರ್ಗದವರು, ಬಡವರು ಮತ್ತು ಬ್ರಾಹ್ಮಣರು ಕಿರುಕುಳಕ್ಕೊಳಗಾಗಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ: ಅಪಪ್ರಚಾರ ಮಾಡಿದವರು ಕೊನೆಗೆ ಲಸಿಕೆ ಹಾಕಿಸಿಕೊಂಡರು: ಅಖಿಲೇಶ್‍ಗೆ ಮೋದಿ ಟಾಂಗ್
Advertisement
Advertisement
ಉತ್ತರ ಪ್ರದೇಶ ಚುನಾವಣೆಯಲ್ಲಿ 2007ರ ಸಾಧನೆಯನ್ನು ಪುನರಾವರ್ತಿಸಲಿದೆ. ಸಮಾಜವಾದಿ ಪಕ್ಷದ (ಎಸ್‍ಪಿ) ಅಧ್ಯಕ್ಷ ಅಖಿಲೇಶ್ ಕುಮಾರ್ ಅವರ ಸರ್ಕಾರ ರಚಿಸುವ ಕನಸು ಭಗ್ನಗೊಳ್ಳಲಿದೆ ಎಂದು ಹೇಳಿದ್ದಾರೆ.