ಬೆಂಗಳೂರು: ಚಂದ್ರಯಾನ-3 (Chandrayaan-3) ಉಡಾವಣೆ ಯಶಸ್ವಿಯಾಗಲಿ ಎಂದು ಸ್ಪೀಕರ್ ಯು.ಟಿ ಖಾದರ್ (UT Khader) ಸದನದಲ್ಲಿ ಶುಭ ಹಾರೈಸಿದ್ದಾರೆ.
ಸದನದ ಪರವಾಗಿ ಚಂದ್ರಯಾನ-3ರ ಉಡಾವಣೆ ಯಶಸ್ವಿಯಾಗಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಭ್ರಮದ ಕ್ಷಣಗಳಲ್ಲಿ ನಾವು ಹೆಮ್ಮೆಪಡೋಣ. ಇಸ್ರೋ (ISRO) ಉಡಾವಣೆ ಮಾಡುತ್ತಿರುವ ಚಂದ್ರಯಾನ ಯಶಸ್ವಿ ಆಗಲಿ ಎಂದು ಶುಭಕೋರೋಣ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ದೆಹಲಿ ಪ್ರವಾಹ – ಸುಪ್ರೀಂ ಕೋರ್ಟ್‍ವರೆಗೂ ಉಕ್ಕಿ ಹರಿದ ಯಮುನೆ
ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಚಂದ್ರಯಾನ-3 ಉಪಗ್ರಹ ಶುಕ್ರವಾರ (ಇಂದು) ಮಧ್ಯಾಹ್ನ ಉಡಾವಣೆ ಆಗಲಿದೆ. ಬಾಹುಬಲಿ ರಾಕೆಟ್ ಎಂದೇ ಹೆಸರಾದ ಜಿಎಲ್‍ಎಲ್‍ವಿ ಮಾರ್ಕ್ 3 ರಾಕೆಟ್ ಇದನ್ನು ಹೊತ್ತೊಯ್ಯಲಿದೆ. ಚಂದ್ರನ ಮಣ್ಣನ್ನು ಅಧ್ಯಯನ ನಡೆಸಲು ಹಾಗೂ ಚಂದ್ರನ ಕಂಪನಗಳನ್ನು ದಾಖಲಿಸಲಿಸುವ ಉದ್ದೇಶ ಸೇರಿದಂತೆ ಹಲವು ಮಹತ್ವಾಕಾಂಕ್ಷೆಯ ಉದ್ದೇಶದಿಂದ ವಿಜ್ಞಾನಿಗಳು ಈ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಇಂದು ಚಂದ್ರಯಾನ-3 ಉಡಾವಣೆ – ನಿಮಗೆ ತಿಳಿದಿರಲೇ ಬೇಕಾದ 10 ಅಂಶಗಳು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]