ಇಂಡೋ-ಆಸೀಸ್‌ ಕದನಕ್ಕೆ ಮಳೆ ಭೀತಿ – ಸತತ 2ನೇ ಜಯಕ್ಕೆ ಭಾರತ ತವಕ

Public TV
2 Min Read
Ind vs Aus 2

– ಭಾರತಕ್ಕೆ ಬೇಕಿದೆ ಬೌಲಿಂಗ್‌ ಬಲ
– ಇತ್ತಂಡಗಳ ಪ್ಲೇಯಿಂಗ್‌-11ನಲ್ಲಿ ಬದಲಾವಣೆ ಸಾಧ್ಯತೆ

ತಿರುವನಂತಪುರಂ: ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ನಡುವಿನ 5 ಪಂದ್ಯಗಳ ಟಿ20 ಸರಣಿ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲಿ ಭಾರತ ದಾಖಲೆಯ ಜಯ ಸಾಧಿಸಿದೆ. 2ನೇ T20 ಪಂದ್ಯವು (T20 Match) ಇಂದು (ನ.26) ಕೇರಳದ ತಿರುವನಂತಪುರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮಳೆ ಅಡ್ಡಿಯುಂಟುಮಾಡುವ ಆತಂಕ ಎದುರಾಗಿದೆ.

Rain 1

ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, 55% ಮಳೆ (Rain) ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗರಿಷ್ಠ ತಾಪಮಾನ 32 ಡಿಗ್ರಿ ಸಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಇದನ್ನೂ ಓದಿ: IPL 2024 Auction: ಮತ್ತೆ ಮುಂಬೈ ಸೇರಲಿದ್ದಾರೆ ಪಾಂಡ್ಯ?

Team india 9

ಮೊದಲ ಪಂದ್ಯದಲ್ಲಿ 209ರನ್‌ ಬಾರಿಸಿ ದಾಖಲೆಯ ಜಯ ಸಾಧಿಸಿರುವ ಭಾರತಕ್ಕೆ ಬೌಲಿಂಗ್‌ (Bowling) ಚಿಂತೆ ಎದುರಾಗಿದೆ. ಮೊದಲ ಪಂದ್ಯದಲ್ಲಿ ಪ್ರಸಿದ್ಧ್‌ ಕೃಷ್ಣ (Prasidh Krishna) 4 ಓವರ್‌ಗಳಲ್ಲಿ 50 ರನ್‌, ರವಿ ಬಿಷ್ಣೋಯಿ (Ravi Bishnoi) 4 ಓವರ್‌ಗಳಲ್ಲಿ 54 ರನ್‌ ಚಚ್ಚಿಸಿಕೊಂಡಿದ್ದರು. ಅಲ್ಲದೇ ಅರ್ಷ್‌ದೀಪ್‌ ಸಿಂಗ್‌ ಸಹ 41 ರನ್‌ ಹೊಡೆಸಿಕೊಂಡಿದ್ದರು. ಬ್ಯಾಟಿಂಗ್‌ನಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ರಿಂಕು ಸಿಂಗ್‌ ಅವರ ಜವಾಬ್ದಾರಿ ಇನ್ನಿಂಗ್ಸ್‌ನಿಂದ ಗೆಲುವು ಸಾಧ್ಯವಾಗಿತ್ತು.

2ನೇ ಪಂದ್ಯದಲ್ಲಿ ಭಾರತ ಬೌಲಿಂಗ್‌ ಸುಧಾರಣೆ ಕಂಡುಕೊಳ್ಳಬೇಕಿದೆ. ಹಾಗಾಗಿ ಮೊದಲ ಪಂದ್ಯದಲ್ಲಿ ಪ್ಲೇಯಿಂಗ್‌-11 ನಿಂದ ಹೊರಗುಳಿದಿದ್ದ ವಾಷಿಂಗ್ಟನ್‌ ಸುಂದರ್‌ ಮತ್ತು ಶಿವಂ ದುಬೆಗೆ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಇನ್ನೂ ಆರಂಭಿಕ ಯಶಸ್ವಿ ಜೈಸ್ವಾಲ್‌, ಋತುರಾಜ್‌ ಗಾಯಕ್ವಾಡ್, ಮಧ್ಯಮ ಕ್ರಮಾಂಕದಲ್ಲಿ ತಿಲಕ್‌ ವರ್ಮಾ ಜವಾಬ್ದಾರಿಯನ್ನರಿತು ಆಡಬೇಕಿದೆ. ಇದನ್ನೂ ಓದಿ: T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

ಮತ್ತೆ ಹೆಡ್ಡೇಕ್‌ ಆಗುತ್ತಾ?
ಮೊದಲ ಪಂದ್ಯದಲ್ಲಿ ಆಸೀಸ್‌ ತಂಡ ವಿರೋಚಿತ ಸೋಲನುಭವಿಸಿದ ಬಳಿಕ ಆಸೀಸ್‌ ತಂಡ ಬದಲಾವಣೆ ತರಲು ಮುಂದಾಗಿದೆ. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 137 ರನ್‌ ಸಿಡಿಸಿ ಭಾರತದ ಗೆಲುವಿಗೆ ಅಡ್ಡಗೋಡೆಯಾಗಿದ್ದ ಟ್ರಾವಿಸ್‌ ಹೆಡ್‌ ಪ್ಲೇಯಿಂಗ್‌-11ನಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಜೊತೆಗೆ ಸ್ಪಿನ್‌ ಮಾಂತ್ರಿಕ ಆಡಂ ಝಂಪಾ ಕೂಡ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share This Article