ದಂಡುಪಾಳ್ಯ (Dandupalya) ಸಿನಿಮಾ ಖ್ಯಾತಿಯ ಶ್ರೀನಿವಾಸ್ ರಾಜು (Srinivas Raju) ಇದೀಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಗೋಲ್ಡನ್ ಸ್ಟಾರ್ ಗಣೇಶ್ (Ganesh) ಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದು, ಸದ್ದಿಲ್ಲದೇ ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ಇದೊಂದು ಫ್ಯಾಮಿಲಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಮಲಯಾಳಂ ಚಿತ್ರ ಖ್ಯಾತಿಯ ಮಾಳವಿಕಾ ನಾಯರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಉಸ್ತಾದ್ ಹೋಟೆಲ್ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬೆಡಗಿ ಮಾಳವಿಕಾ ನಾಯರ್. ಮಲಯಾಳಂ (Malayalam) ಸಿನಿಮಾ ರಂಗದಲ್ಲಿ ಮಾತ್ರವಲ್ಲ, ತೆಲುಗು ಚಿತ್ರಗಳಲ್ಲೂ ಮಾಳವಿಕಾ ಅಭಿನಯಿಸಿದ್ದಾರೆ. 2012ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ಅಲ್ಲಿಂದ ನಿರಂತರವಾಗಿ ಹನ್ನೊಂದು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀರಾಗಿದ್ದಾರೆ. ಇದನ್ನೂ ಓದಿ:ಮತ್ತೆ ಸ್ಟೈಲೀಶ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಸಾನ್ಯ ಅಯ್ಯರ್
ಕುಕ್ಕೂ, ಬ್ಲ್ಯಾಕ್ ಬಟರ್ ಫ್ಲೈ ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಮಾಳವಿಕಾ ನಾಯರ್ (Malavika Nair), ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗಣೇಶ್ ನಟಿಸುತ್ತಿರುವ ಈ ಹೊಸ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಒಂದು ಪಾತ್ರವನ್ನು ಮಾಳವಿಕ ನಾಯರ್ ನಿರ್ವಹಿಸಿದರೆ ಮತ್ತೊಂದು ಪಾತ್ರಕ್ಕೆ ನಾಯಕಿಯ ಆಯ್ಕೆ ನಡೆಯುತ್ತಿದೆಯಂತೆ.
ಇದೊಂದು ಪಕ್ಕಾ ಎಂಟರ್ ಟೇನ್ಮೆಂಟ್ ಸಿನಿಮಾವಾಗಿದ್ದರಿಂದ ತಾರಾಗಣದಲ್ಲೂ ಅಂತಹ ಕಲಾವಿದರನ್ನೇ ಕಾಣಬಹುದಾಗಿದೆ. ಸಾಧು ಕೋಕಿಲಾ, ಗಿರಿ ಶಿವಣ್ಣ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು, ಮುಂದಿನ ಹಂತದ ಚಿತ್ರೀಕರಣದಲ್ಲಿ ಮಾಳವಿಕಾ ನಾಯರ್ ಭಾಗಿಯಾಗಲಿದ್ದಾರಂತೆ.
Web Stories