CrimeLatestMain PostNational

ಹಣಕ್ಕಾಗಿ ವೃದ್ಧೆಯ ಕಣ್ಣಿಗೆ ಹಾರ್ಪಿಕ್, ಝಂಡುಬಾಂಬ್ ಮಿಶ್ರಣದ ದ್ರವ್ಯ ಬಿಟ್ಟು ಕುರುಡು ಮಾಡಿದ್ಲು!

Advertisements

ಹೈದರಾಬಾದ್: ಮಹಿಳೆಯೊಬ್ಬಳು ಹಣದ ಆಸೆಗಾಗಿ ಹಾರ್ಪಿಕ್ ಮತ್ತು ಝಂಡುಬಾಂಬ್‍ನ ಮಿಶ್ರಣದ ದ್ರವ್ಯವನ್ನು ವೃದ್ಧೆಯ ಕಣ್ಣಿಗೆ ಹಾಕಿ ಅವರನ್ನು ಕುರುಡು ಮಾಡಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಪಿ. ಭಾರ್ಗವಿ(32) ಬಂಧಿತ ಆರೋಪಿ ಹಾಗೂ ಹೇಮಾವತಿ (73) ವೃದ್ಧೆ. ಹೇಮಾವತಿಯೂ ಸಿಕಂದರಾಬಾದ್‍ನ ನಾಚರಮ್‍ನಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಅವರ ಮಗ ಶಶಿಧರ್ ಅವರು ಲಂಡನ್‍ನಲ್ಲಿ ವಾಸಿಸುತ್ತಿದ್ದರು. ಇದರಿಂದಾಗಿ 2021ರ ಅಗಸ್ಟ್‌ನಲ್ಲಿ ಹೇಮಾವತಿಯನ್ನು ನೋಡಿಕೊಳ್ಳಲು ಭಾರ್ಗವಿಯನ್ನು ಕೇರ್‌ಟೇಕರ್ ಹಾಗೂ ಮನೆಕೆಲಸದಾಕೆಯಾಗಿ ನೇಮಿಸಿದ್ದರು.

ಭಾರ್ಗವಿಯೂ ತನ್ನ 7 ವರ್ಷದ ಮಗಳೊಂದಿಗೆ ಹೇಮಾವತಿಯ ಅಪಾರ್ಟ್‍ಮೆಂಟ್‍ಗೆ ಬಂದರು. ಆದರೆ ಭಾರ್ಗವಿಯೂ ಹೇಮಾವತಿಯ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ನೊಡಿ, ಅದನ್ನು ಕದಿಯಲು ಅವಕಾಶಕ್ಕಾಗಿ ಕಾಯುತ್ತಿದ್ದಳು.

ಅಕ್ಟೋಬರ್‌ನಲ್ಲಿ ಭಾರ್ಗವಿಯೂ ಹೇಮಾವತಿ ಉಜ್ಜುವುದನ್ನು ನೋಡಿದಳು. ಅದಕ್ಕೆ ಭಾರ್ಗವಿಯು ಕಣ್ಣನ್ನು ಸ್ವಚ್ಛಗೊಳಿಸಲು ಐ ಡ್ರಾಪ್ ಹಾಕುವುದಾಗಿ ಹೇಮಾವತಿಗೆ ತಿಳಿಸಿ, ಹಾರ್ಪಿಕ್, ಝಂಡುಬಾಂಬ್ ಮಿಶ್ರಣ ಮಾಡಿದ ಡ್ರಾಪ್‍ನ್ನು ಹೇಮಾವತಿ ಕಣ್ಣಿಗೆ ಹಾಕಿದ್ದಾಳೆ. ಇದನ್ನೂ ಓದಿ: ಉಕ್ರೇನ್‍ನಿಂದ ರಕ್ಷಿಸುವಂತೆ ವೀಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕಿದ ಗ್ರಾ.ಪಂ. ಅಧ್ಯಕ್ಷೆ

ಇದರಿಂದಾಗಿ ಹೇಮಾವತಿ ಸಂಪೂರ್ಣವಾಗಿ ಕಣ್ಣು ಕಳೆದುಕೊಂಡರು. ಇದರಿಂದಾಗಿ ಶಶಿಧರ್ ಹೈದರಾಬಾದ್‍ಗೆ ಬಂದು ಪ್ರತಿಷ್ಠಿತ ಆಸ್ಪತ್ರೆಗೆ ಹೇಮಾವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರಿಗೆ ವೈದ್ಯರೂ ಹೇಮಾವತಿಯೂ ಸಂಪೂರ್ಣವಾಗಿ ಕುರುಡುತನಕ್ಕೆ ಜಾರಲು ವಿಷಕಾರಿ ದ್ರವ್ಯ ಕಾರಣ ಎಂದು ತಿಳಿಸಿದ್ದಾರೆ. ಇದರಿಂದಾಗಿ ಹೇಮಾವತಿಯ ಕುಟುಂಬದವರು ಭಾರ್ಗವಿಯ ಮೇಲೆ ಅನುಮಾನಪಟ್ಟಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶ ರಾಕೆಟ್‌ನಿಂದ ಅಮೆರಿಕ, ಜಪಾನ್‌ ಧ್ವಜ ತೆಗೆದು ಭಾರತ ಧ್ವಜ ಉಳಿಸಿಕೊಂಡ ರಷ್ಯಾ- Video Viral

ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಬಗ್ಗೆ ಪೊಲೀಸರು ಭಾರ್ಗವಿಯನ್ನು ವಿಚಾರಣೆ ನಡೆಸಿದಾಗ ಹೇಮಾವತಿಯನ್ನು ಕುರುಡುಗೊಳಿಸಿ 40 ಸಾವಿರ ನಗದು, 2 ಚಿನ್ನದ ಬಳೆ, ಚಿನ್ನದ ಸರ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧಿಸಿ ಹೈದರಾಬಾದ್ ಪೊಲೀಸ್‍ರು ಭಾರ್ಗವಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published.

Back to top button