ಚೆನ್ನೈ: ಹಾಸ್ಟೆಲ್ ನಲ್ಲಿ ಕಾಂಡೋಮ್ ಬಳಸಿದ್ದ ವಿದ್ಯಾರ್ಥಿಗೆ ದಂಡ ವಿಧಿಸಿದ್ದು, ವಿದ್ಯಾರ್ಥಿಯ ವಿವರಗಳನ್ನು ಹಾಸ್ಟೆಲ್ ಕಚೇರಿಯಲ್ಲಿ ನೋಟಿಸ್ ಬೋರ್ಡ್ ನಲ್ಲಿ ಹಾಕಿದ್ದರಿಂದ ಐಐಟಿ ಮದ್ರಾಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಳೆದ ವಾರ ಬ್ರಹ್ಮಪುತ್ರ ವಿದ್ಯಾರ್ಥಿಗಳ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳು ಹಾಸ್ಟೆಲ್ ನಲ್ಲಿ ಶೋಧ ಮಾಡಿದ್ದಾರೆ. ಈ ವೇಳೆ ಕಬ್ಬಿಣದ ಬಾಕ್ಸ್, ಮೊಟ್ಟೆ ಬಾಯ್ಲರ್, ಮಿನಿ ಫ್ರಿಜ್, ವಾಟರ್ ಕೂಲರ್ ಮುಂತಾದ ಅನೇಕ ನಿಷೇಧಿತ ವಸ್ತುಗಳ ಪತ್ತೆಯಾಗಿದೆ. ಆಗ ಒಂದು ರೂಮಿನಲ್ಲಿ 20 ಸಿಗರೇಟು ತುಂಡುಗಳು, ಬೆಂಕಿಪಟ್ಟಣ ಮತ್ತು ಬಳಸಿದ್ದ ಕಾಂಡೋಮ್ ಗಳು ಕಸದ ಬುಟ್ಟಿಯಲ್ಲಿ ಕಂಡುಬಂದಿದೆ.
Advertisement
ಹಾಸ್ಟೆಲ್ ರೂಮ್ ನಲ್ಲಿ ಕಾಂಡೋಮ್ ಬಳಕೆ ಮಾಡಿದ್ದ ವಿದ್ಯಾರ್ಥಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿ, ವಿವರಗಳನ್ನು ನೋಟೀಸ್ ಬೋರ್ಡ್ ಗೆ ಹಾಕಿ ಬಹಿರಂಗಪಡಿಸಿ ಅವಮಾನ ಮಾಡಿದೆ. ಈ ಸುದ್ದಿಯನ್ನು ಪತ್ರಿಕೆಯೊಂದು ವರದಿ ಮಾಡಿತ್ತು. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಐಐಟಿ ಮದ್ರಾಸ್ ಟ್ರೋಲ್ ಗೆ ಒಳಗಾಗಿದೆ.
Advertisement
Advertisement
ಅಧಿಕಾರಿಗಳು ಏಕಾಏಕಿ ರೂಮಿಗೆ ನುಗ್ಗಿದ್ದರು. ಅಷ್ಟೇ ಅಲ್ಲದೇ ಒಪ್ಪಿಗೆ ಇಲ್ಲದೇ ಫೋಟೋ ಕ್ಲಿಕ್ಕಿಸಿಕೊಂಡು ಕಿರುಕುಳ ನೀಡಿ ಅಪಮಾನ ಮಾಡಲಾಗಿದೆ. ರೂಮ್ ಮತ್ತು ಹಾಸಿಗೆ ಚೆನ್ನಾಗಿದೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
Advertisement
ಇದೇ ವೇಳೆ ವಿದ್ಯಾರ್ಥಿಯ ವಿವರಗಳನ್ನು ಬಹಿರಂಗಪಡಿಸಿರುವುದನ್ನು ಐಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಅಧಿಕಾರಿಗಳು ವಿದ್ಯಾರ್ಥಿಗಳ ಗೌಪ್ಯತೆ ಮತ್ತು ಘನತೆಯನ್ನು ಕಾಪಾಡಲಾಗಿದೆ. ಸಾಕ್ಷಿಗಾಗಿ ಫೋಟೋಗಳನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ವಿದ್ಯಾರ್ಥಿಯನ್ನು ಅವಮಾನಿಸಿಲ್ಲ ಎಂದು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀರಾಮ್ ಕೆ.ಕೊಂಪೆಲ್ಲಾ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv