ಭಾರತೀಯ ರಾಷ್ಟ್ರೀಯ ಕಾಂಗ್ರಸ್ ಪಕ್ಷದ ಭಾರತ್ ಜೋಡೋ ಯಾತ್ರೆಯ (Bharat Jodo Yatra) ವಿಡಿಯೋಗಳಿಗೆ ‘ಕೆಜಿಎಫ್’ (KGF) ಸಿನಿಮಾದ ಹಾಡೊಂದರ ಮ್ಯೂಸಿಕ್ ಬಳಸಿರುವ ಆರೋಪ ಕೇಳಿ ಬಂದಿದ್ದು, ಕಾಪಿ ರೈಟ್ಸ್ ಉಲ್ಲಂಘನೆಗಾಗಿ ಕಾಂಗ್ರೆಸ್ ಪಕ್ಷದ ಮೇಲೆ ಎಮ್.ಆರ್.ಟಿ ಸಂಸ್ಥೆಯು ಕಾನೂನು ಸಮರಕ್ಕೆ ಮುಂದಾಗಿದೆ. ತಮ್ಮ ಸಂಸ್ಥೆಯ ಅನುಮತಿ ಇಲ್ಲದೇ, ಕೆಜಿಎಫ್ ಸಿನಿಮಾದ ಸಂಗೀತವನ್ನು ಬಳಸಿಕೊಂಡಿದ್ದಕ್ಕಾಗಿ ಸಂಸ್ಥೆಯು ದೂರು ದಾಖಲಿಸಿದೆ.
Advertisement
MRT ಸಂಸ್ಥೆಗೆ ಸೇರಿದ ಹಾಡುಗಳನ್ನು ಬಳಸಿದ ಆರೋಪ ಹೊತ್ತಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು, ಸಂಸ್ಥೆಯ ಅನುಮತಿ ಇಲ್ಲದೇ ಹಾಡುಗಳನ್ನು ಯಾತ್ರೆಯಲ್ಲಿ ಬಳಸಿದ್ದಾರೆ. ಕೆಜಿಎಫ್ ಸಿನಿಮಾದ ‘ಸುಲ್ತಾನಾ..’ ಹಾಡನ್ನು ಯಾತ್ರೆಯಲ್ಲಿ ಬಳಸಿದ್ದಕ್ಕಾಗಿ ಕೆಜಿಎಫ್ ಚಿತ್ರದ ಹಾಡುಗಳ ಪ್ರಸಾರ ಹಕ್ಕು ಹೊಂದಿರುವರ MRT ಸಂಸ್ಥೆಯು ರಾಹುಲ್ ಗಾಂಧಿ (Rahul Gandhi) , ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ (Supriya) ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್ (Jairam Ramesh) ವಿರುದ್ಧ ದೂರು ದಾಖಲಾಗಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ (FIR) ದಾಖಲಾಗಿದೆ. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ
Advertisement
Advertisement
ದೇಶಾದ್ಯಂತ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಮತ್ತು ಆಯಾ ರಾಜ್ಯಗಳ ಮುಖಂಡರು ಭಾಗಿಯಾಗಿದ್ದು, ಹಿಂದಿಯಲ್ಲಿ ತಯಾರಾದ ವಿಡಿಯೋಗಳಿಗೆ ಕೆಜಿಎಫ್ ಮ್ಯೂಸಿಕ್ ಅಳವಡಿಸಲಾಗಿತ್ತು. ಆ ವಿಡಿಯೋಗಳನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಪೇಸ್ ಗಳಾದ ಟ್ವಿಟರ್ ಅಕೌಂಟ್, ಯ್ಯೂಟ್ಯಬ್ ಹಾಗೂ ಯಾತ್ರೆಯಲ್ಲೂ ಬಳಸಲಾಗಿತ್ತು. ಹಾಗಾಗಿ ಸಂಸ್ಥೆಯ ಅನುಮತಿ ಪಡೆಯದೇ ಇರುವ ಕಾರಣಕ್ಕಾಗಿ ಕಾನೂನು ಕ್ರಮಕ್ಕೆ ಮುಂದಾಗಿದೆ ಎಮ್.ಆರ್.ಟಿ ಸಂಸ್ಥೆ.
Advertisement
ಯಶ್ ನಟನೆಯ ಕೆಜಿಎಫ್ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲೇ ಹೊಸ ದಾಖಲೆಯನ್ನು ಬರೆದಂತಹ ಚಿತ್ರ. ಈ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ. ರಿಲೀಸ್ ಆದ ಎಲ್ಲಾ ಭಾಷೆಗಳಲ್ಲೂ ಚಿತ್ರ ಕೋಟಿ ಕೋಟಿ ಬಾಚಿದೆ. ಅಲ್ಲದೇ, ಈ ಸಿನಿಮಾದ ಸುಲ್ತಾನ ಹಾಡು ಕೂಡ ಅಷ್ಟೇ ಫೇಮಸ್ ಆಗಿತ್ತು. ಸಿನಿಮಾದ ಹೀರೋನನ್ನು ವೈಭವೀಕರಿಸುವ ಹಾಡು ಇದಾಗಿತ್ತು. ಇದೇ ಹಾಡನ್ನು ಕಾಂಗ್ರೆಸ್ ತನ್ನ ಯಾತ್ರೆಗೆ ಬಳಸಿಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದೆ.