ಬೆಂಗಳೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಆಪರೇಶನ್ ಚಿತಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಶಿವಮೊಗ್ಗದ ಸಕ್ರೆಬೈಲಿನಿಂದ ಗಜಪಡೆ ಬೆಳಗಾವಿಯತ್ತ ಮುಖಮಾಡಿದೆ. ಮಹಾನಗರದ ಗಾಲ್ಫ್ ಮೈದಾನದಲ್ಲಿ ಚಿರತೆ ಸರ್ಚಿಂಗ್ ಆಪರೇಷನ್ ನಡೆಯುತ್ತಿದ್ದು ಹೈ ಡೆಫೆನೆಶನ್ ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ.
ಕಳೆದ 19 ದಿನಗಳಿಂದ ಕುಂದಾನಗರಿ ಜನರ ನಿದ್ದೆಗೆಡಸಿದ ಚಿರತೆ ಹುಟುಕಾಟಕ್ಕಾಗಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಶ್ರಮಪಡುತ್ತಿದೆ. ಸೋಮವಾರ ಎರಡೆರಡು ಬಾರಿ ಮುಖ ದರ್ಶನ ಮಾಡಿದ ಚಿರತೆ ಕಣ್ಣುಮುಚ್ಚಾಲೆ ಆಟವಾಡುತ್ತಿದೆ. ಚಿರತೆಯನ್ನು ಮಟ್ಟ ಹಾಕಲು ಬೆಂಗಳೂರಿನಿಂದ ಡ್ರೋಣ್ ಎಕ್ಸ್ ಪರ್ಟ್ ಕರೆಸಲಾಗಿದ್ದು ಗಾಲ್ಫ್ ಮೈದಾನದ ಮೇಲೆ ಹದ್ದಿನ ಕಣ್ಣುಗಳಿಂತಿರುವ ಎರಡು ಡ್ರೋನ್‌ಗಳು ಹಾರಾಟ ನಡೆಸುತ್ತಿವೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ – 22 ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
ಬೆಳ್ಳಂಬೆಳಗ್ಗೆ ಬೀದಿ ನಾಯಿಗಳನ್ನು ತಿಂದು ದಟ್ಟವಾದ ಗಿಡಮರಗಳ ಮಧ್ಯೆ ಮರೆಯಾಗುತ್ತಿದೆ. ಹಗಲಿರುಳು ಕಾರ್ಯಾಚರಣೆ ಮಾಡಿ ಚಿರತೆಯನ್ನು ಬೋನಿಗೆ ಹಾಕುವ ಪ್ರಯತ್ನಕ್ಕಾಗಿ ಸಕ್ರಬೈಲಿನಿಂದ ಎರಡು ಆನೆಗಳನ್ನು ಕರೆತರಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಬೆಳಗಾವಿ ನಗರ ಜನತೆಗೆ ಸಿಹಿ ಸುದ್ದಿ ನೀಡಲಾಗುವುದು ಎಂದು ಸಿಸಿಎಫ್ ಹೇಳಿದ್ದಾರೆ.
ಮೂರು ವಾರಗಳಿಂದ ಚಿರತೆ ಬಂದ ಏರಿಯಾದ ಜನತೆಗೆ ಆತಂಕ ಇದ್ದೇ ಇದೆ. ಮಕ್ಕಳ ಸುರಕ್ಷತಾ ಹಿತದೃಷ್ಟಿಯಿಂದ 1 ರಿಂದ 4ರ ವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆನ್ ಲೈನ್ ಮೂಲಕ ತರಗತಿಗಳು ಚಾಲ್ತಿಯಲ್ಲಿವೆ. ಸಂಪೂರ್ಣ ಜಿಲ್ಲಾಡಳಿತ ಚಿರತೆ ಬೋನಿಗೆ ಹಾಕುವ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿದೆ. ಜನರು ತಮ್ಮ ಸುರಕ್ಷತೆಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಶಾಸಕ ಅನೀಲ ಬೆನಕೆ ತಿಳಿಸಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವದ ವೇಳೆ ಸಾವರ್ಕರ್ ಉತ್ಸವ ಆಚರಿಸಲು ಸಿದ್ಧತೆ
300ಕ್ಕೂ ಹೆಚ್ಚು ಅರಣ್ಯ ಅಧಿಕಾರಿಗಳು, 100 ಪೊಲೀಸ್ ಅಧಿಕಾರಿಗಳು ಸೇರಿದಂತೆ ಡ್ರೋನ್ ಕ್ಯಾಮರಾ, ಬೇಟೆ ನಾಯಿಗಳು, ಇನ್ ಪ್ರಾ ರೆಡ್ ಕ್ಯಾಮರಾಮನ್, ನೈಟ್ ಕೊಂಬಿಂಗ್ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯ ಸಚಿವರು ಬೆಳಗಾವಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಚಿರತೆ ಹಿಡಿದು ಕಾಡಿಗಟ್ಟಲು ಬೇಕಾದ ಎಲ್ಲಾ ಕ್ರಮಗಳನ್ನು ತ್ವರಿತವಾಗಿ ಮಾಡುವಂತೆ ಸೂಚನೆ ನೀಡಿದ್ದಾರೆ.