ಬೆಂಗಳೂರು/ಬೆಳಗಾವಿ: ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ SCSP-TSP ಹಣವನ್ನ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ವಿಧಾನ ಪರಿಷತ್‌ನಲ್ಲಿ ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ಅವರು ಮಾಹಿತಿ ನೀಡಿದ್ದಾರೆ.
2.5 ವರ್ಷಗಳಲ್ಲಿ SCSP ಯೋಜನೆಯ ಹಣದಲ್ಲಿ 25,909 ಕೋಟಿ ರೂ. ಹಾಗೂ TSP ಅನುದಾನದಲ್ಲಿ 11,273 ಕೋಟಿ ರೂ. ಖರ್ಚು ಮಾಡಲಾಗಿದೆ ಅಂತ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಗ್ಯಾರಂಟಿ 5 ಯೋಜನೆಗೆ SCSP-TSP ಹಣದಲ್ಲಿ ಸರ್ಕಾರ ಖರ್ಚು ಮಾಡಿರೋ ಅಂಕಿಅಂಶಗಳು ಹೀಗಿವೆ.ಇದನ್ನೂ ಓದಿ: ಪ್ರೀತಿಯಿಂದ ಊಟಕ್ಕೆ ಕರೆದರೆ ಬರಲ್ಲ ಅನ್ನೋಕೆ ಆಗುತ್ತದೆಯೇ: ಡಿಕೆಶಿ
ದಲಿತರ ಹಣ ಗ್ಯಾರಂಟಿಗೆ ಬಳಕೆ?
2023 ರಿಂದ 2025 ನವೆಂಬರ್‌ವರೆಗೆ ಗ್ಯಾರಂಟಿಗೆ ಬಿಡುಗಡೆಯಾದ SCSP-TSP ಹಣ ಅಂಕಿಅಂಶಗಳು:
ಗೃಹಲಕ್ಷ್ಮಿ
SCSP-14,743 ಕೋಟಿ ರೂ.
TSP-6,317 ಕೋಟಿ ರೂ.
ಅನ್ನಭಾಗ್ಯ
SCSP – 3,701 ಕೋಟಿ ರೂ.
TSP- 1,584 ಕೋಟಿ ರೂ.
ಯುವನಿಧಿ
SCSP -202 ಕೋಟಿ ರೂ.
TSP- 81 ಕೋಟಿ ರೂ.
ಗೃಹಜ್ಯೋತಿ
SCSP -4,562 ಕೋಟಿ ರೂ.
ಖಿSP- 2,076 ಕೋಟಿ ರೂ.
ಶಕ್ತಿ ಯೋಜನೆ
SCSP – 2,701 ಕೋಟಿ ರೂ.
TSP- 1,215 ಕೋಟಿ ರೂ.
ಒಟ್ಟು ಹಣ
SCSP -25,909 ಕೋಟಿ ರೂ.
TSP- 11,273 ಕೋಟಿ ರೂ.

