ಲಂಡನ್: ಅಮೆರಿಕ ಇರಾನ್ ಯುದ್ಧದಿಂದಾಗಿ (USA-Iran War) ಕಚ್ಚಾ ತೈಲ ದರ (Crude Oil Price) ಈಗ ಭಾರೀ ಏರಿಕೆ ಕಾಣಲು ಆರಂಭವಾಗಿದ್ದು ಕೋವಿಡ್ 19 ಬಳಿಕ ಒಂದು ಬ್ಯಾರೆಲ್ ತೈಲ ಬೆಲೆ 90 ಡಾಲರ್ ಗಡಿ ದಾಟಿದೆ.
ಇರಾನ್ ಸೌದಿ, ಕುವೈತ್‌ನಲ್ಲಿರುವ ತೈಲ ಸಂಸ್ಕರಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದರಿಂದ ತೈಲ ಉತ್ಪಾದನೆ ಕುಸಿತವಾಗಿದೆ. ಇದರ ಬೆನ್ನಲ್ಲೇ ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 91.89 ಡಾಲರ್(8,440 ರೂ.) ಏರಿಕೆಯಾಗಿದೆ. ಇದನ್ನೂ ಓದಿ: ದೇಶದಲ್ಲಿ 250 ಮಿಲಿಯನ್ ಬ್ಯಾರಲ್‌ಗೂ ಹೆಚ್ಚು ಕಚ್ಚಾ ತೈಲ ಸಂಗ್ರಹ – ಇಂಧನ ಬಿಕ್ಕಟ್ಟು ವದಂತಿ ತಳ್ಳಿ ಹಾಕಿದ ಕೇಂದ್ರ
ಕಳೆದ ಶನಿವಾರ ಯುದ್ಧ ಆರಂಭವಾಗುವ ಮೊದಲು ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 72.50 ಡಾಲರ್ ಇತ್ತು. ಈಗ ಕಳೆದ 8 ದಿನಗಳಲ್ಲಿ 19 ಡಾಲರ್ ಏರಿಕೆಯಾಗಿದೆ. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಬ್ಯಾರೆಲ್ ಕಚ್ಚಾ ತೈಲದ ಬೆಲೆ 90.90 ಡಾಲರ್‌ಗೆ ಏರಿಕೆಯಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪೆಟ್ರೋಲ್ ದರ 55 ರೂ. ಏರಿಕೆ- ಈಗ 1 ಲೀಟರ್ ಪೆಟ್ರೋಲ್‌ಗೆ 321 ರೂ.

